ಕರ್ನಾಟಕ

karnataka

ETV Bharat / bharat

ಜನರ ಮನ್​ಕಿ ಬಾತ್​ ಫಲಿತಾಂಶದಲ್ಲಿ ಗೊತ್ತಾಗುತ್ತೆ: ಬಿಜೆಪಿಗೆ ಶಿವಸೇನೆ ಟಾಂಗ್​ - 2014ರ ಚುನಾವಣೆ ಭರವಸೆ

2014ರ ಭರವಸೆಗಳ ಬಗ್ಗೆ ಜನರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿ ಎಂದು ಬಿಜೆಪಿಗೆ ಶಿವಸೇನೆ ಹೇಳಿದೆ

ಬಿಜೆಪಿಗೆ ಟಾಂಗ್​ ನೀಡಿದ ಶಿವಸೇನೆ

By

Published : Mar 12, 2019, 2:31 PM IST

ಮುಂಬೈ: ಬಿಜೆಪಿಯೊಂದಿಗೆ ಕೈ ಕುಲುಕಿದ ಶಿವಸೇನೆ ಮತ್ತೊಂದೆಡೆ ಕಾಲೆಳೆಯುತ್ತಲೇ ಬಂದಿದೆ. 2014ರ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿ ಎಂದು ಬಿಜೆಪಿಗೆ ಟಾಂಗ್​ ನೀಡಿದೆ.

2014 ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಸಂಬಂಧ ಬಿಜೆಪಿ ಭರವಸೆ ನೀಡಿತ್ತು. ಈ ಬಗ್ಗೆ ಜನರು ಈಗ ಕೇಳುವ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ಸಿದ್ಧಮಾಡಿಕೊಳ್ಳಬೇಕಿದೆ ಎಂದು ಹೇಳಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಹೀಗೆ ಬರೆದುಕೊಂಡಿರುವ ಶಿವಸೇನೆ, ಈವರೆಗೆ ಪ್ರಧಾನಿ ಮೋದಿ ಅವರ ಮನ್​ ಕಿ ಬಾತ್​ ನಡೆಸಿದರು. ಅಂತೆಯೆ, ಜನರ ಮನ್​ ಕಿ ಬಾತ್ ಏನೆಂಬುದು ಮೇ 23ರಂದು ತಿಳಿಯಲಿದೆ ಎಂದು ಮಾರ್ಮಿಕವಾಗಿ ಹೇಳಿದೆ.

ಜನರನ್ನು ದೀರ್ಘ ಕಾಲ ಮೂರ್ಖರನ್ನಾಗಿ ಮಾಡಲಾಗದು. ಜನರು ಈ ಬಗ್ಗೆ ಪ್ರಶ್ನೆಗಳನ್ನು ಹೊಂದಿದ್ದು, ಅವರು ನಿರೀಕ್ಷಿಸುತ್ತಿರುವ ಉತ್ತರ ಮತಯಂತ್ರಗಳ ಮೂಲಕ ತಿಳಿಯಲಿದೆ ಎಂದು ಪರೋಕ್ಷವಾಗಿ ಕುಟುಕಿದೆ.

2014ರಲ್ಲಿ ನೀಡಿದ್ದ ಭರವಸೆಗಳು 2019ರಲ್ಲಿಯೂ ಈಡೇರಿಲ್ಲ. ಕಾಶ್ಮೀರ, ರಾಮಮಂದಿರ ಎರಡೂ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಜನರು ಈ ಬಗ್ಗೆ ಪ್ರಶ್ನೆ ಕೇಳಿದಾಗ ಅವರು (ಬಿಜೆಪಿ) ಉತ್ತರಿಸಲು ಸಿದ್ಧರಾಗಿ ಎಂದು ಸೂಚಿಸಿದೆ.

ಹಣಬಲದಿಂದ ಮತಯಂತ್ರಗಳನ್ನು ನಿಯಂತ್ರಣ ಸಾಧ್ಯವಿರುವುದರಿಂದ ಎಲ್ಲ ದೇಶಗಳು ಅವುಗಳ ಬಳಕೆಯನ್ನು ಸ್ಥಗಿತಗೊಳಿಸಿವೆ. ನಾವು ಇನ್ನೂ ಬಳಸುತ್ತಿರುವುದೇಕೆ? ಎಂದು ಪ್ರಶ್ನೆ ಮಾಡಿದೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಕೊನೆ ಕ್ಷಣದವೆಗೂ ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್​ ಕಾರ್ಯಕ್ರಮಗಳ ಉದ್ಘಾಟನೆ, ಘೋಷಣೆ, ಚಾಲನೆ ನೀಡುವಲ್ಲಿಯೇ ನಿರತರಾಗಿದ್ದರು ಎಂದು ವ್ಯಂಗ್ಯವಾಡಿದೆ. ಪ್ರಧಾನಿ ಹಾಗೂ ರಾಜ್ಯಗಳ ಸಿಎಂ ಹೊರತಾಗಿ ಎಲ್ಲರಿಗೂ ನೀತಿ ಸಂಹಿತೆ ಅನ್ವಯವಾಗ್ತಿದೆ ಎಂದೂ ಕುಟುಕಿದೆ.

ABOUT THE AUTHOR

...view details