ಕರ್ನಾಟಕ

karnataka

ETV Bharat / bharat

ಭಕ್ತಿ ಪರಾಕಾಷ್ಠೆಯೋ, ಪ್ರತಿಷ್ಠೆಯೋ..! ಬಾಲಾಪುರ್​ ಗಣೇಶನ ಲಡ್ಡು ಬಿಕರಿಯಾಗಿದ್ದು ಎಷ್ಟಕ್ಕೆ ಗೊತ್ತಾ?

ಬಾಲಾಪುರ್​ ಗಣೇಶ ಲಡ್ಡು, ಕಳೆದ ವರ್ಷ 16.60 ಲಕ್ಷ ರೂ. ಗಳಿಗೆ ಬಿಕರಿಯಾಗಿತ್ತು. ಈ ಬಾರಿ ಒಂದು ಲಕ್ಷ ರೂ. ಹೆಚ್ಚಿನ ಮೊತ್ತಕ್ಕೆ ಲಡ್ಡು ಹರಾಜಾಗಿದೆ. ಕೊಲಾನ್​ ರಾಮಿ ರೆಡ್ಡಿ ಎಂಬುವರು 17.60 ಲಕ್ಷ ರೂ.ಗಳನ್ನು ನೀಡಿ ಬಾಲಾಪುರ್​ ಲಡ್ಡನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಾಪುರ್​ ಗಣೇಶ ಲಡ್ಡು

By

Published : Sep 12, 2019, 12:38 PM IST

ಹೈದರಾಬಾದ್​: ಚೌತಿ ನಿಮಿತ್ತ ಇಲ್ಲಿನ ಬಾಲಾಪುರ್​ ಗಣೇಶನಿಗೆ ನೈವೇದ್ಯವಾಗಿ ಮಾಡಲಾಗುವ ಲಡ್ಡು ಈ ಬಾರಿ ಹರಾಜಿನಲ್ಲಿ ಹೊಸ ದಾಖಲೆ ಬರೆದಿದೆ. ಈ ಬಾರಿ ಬರೋಬ್ಬರಿ 17.60 ಲಕ್ಷಕ್ಕೆ ರೂಪಾಯಿ ಲಡ್ಡು ಬಿಕರಿಯಾಗಿದೆ.

ಕಳೆದ ವರ್ಷ ಇದೇ ಬಾಲಾಪುರ್​ ಗಣೇಶನ ಲಡ್ಡು, 16.60 ಲಕ್ಷ ರೂ.ಗಳಿಗೆ ಬಿಕರಿಯಾಗಿತ್ತು. ಈ ಬಾರಿ ದಾಖಲೆ ಹಿಂದಿಕ್ಕಿದ್ದಾರೆ ಭಕ್ತರು. ಕೊಲಾನ್​ ರಾಮಿ ರೆಡ್ಡಿ ಎಂಬುವರು 17.60 ಲಕ್ಷ ರೂ.ಗಳನ್ನು ನೀಡಿ ಬಾಲಾಪುರ್​ ಲಡ್ಡನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೊಲಾನ್​ ಕುಟುಂಬವು ಈವರೆಗೆ ಒಟ್ಟು 9 ವರ್ಷ ಈ ಲಡ್ಡನ್ನು ಬಿಡ್​ ಮೂಲಕ ಪಡೆದುಕೊಂಡಿದ್ದಾರೆ. ಇಂದು ಬೆಳಗ್ಗೆ ಹರಾಜು ಪ್ರಕ್ರಿಯೆ ಆರಂಭಗೊಂಡಿತ್ತು. ಒಟ್ಟು 19 ಜನ ಈ ಇದರಲ್ಲಿ ಭಾಗವಹಿಸಿದ್ದರು. 1,116 ರೂ.ಗೆ ಆರಂಭಗೊಂಡ ಹರಾಜು ಪ್ರಕ್ರಿಯೆ ಅಂತಿಮವಾಗಿ 17.60 ಲಕ್ಷಕ್ಕೆ ಮುಕ್ತಾಯಗೊಂಡಿತು.

ಬಾಲಾಪುರ್​ ಗಣೇಶ ಉತ್ಸವ ಸಮಿತಿಯು ಸತತ 23 ವರ್ಷಗಳಿಂದ ಈ ಲಡ್ಡು ಹರಾಜು ನಡೆಸುತ್ತಾ ಬಂದಿದೆ.

ABOUT THE AUTHOR

...view details