ಕರ್ನಾಟಕ

karnataka

ETV Bharat / bharat

ಮೇ 15 ರಿಂದ ಶ್ರೀ ಬದರಿನಾಥ ದೇಗುಲ ದರ್ಶನ ಪೋರ್ಟಲ್‌ ಪ್ರಾರಂಭ - ಉತ್ತರಾಖಂಡ ಚಾರ್ಧಂ ದೇವಸ್ತಾನಂ ಮಂಡಳಿ

ದೇವಾಲಯದ ಆವರಣದಿಂದ ಹಿಮವನ್ನು ತೆಗೆಯಲಾಗಿದ್ದು, ನೀರು ಮತ್ತು ವಿದ್ಯುತ್ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರದ ಬಗ್ಗೆಯೂ ವಿಶೇಷ ಗಮನ ನೀಡಲಾಗುತ್ತಿದ್ದು, ಮುಖಗವಸು ಧರಿಸುವುದು ಕೂಡ ಕಡ್ಡಾಯಗೊಳಿಸಲಾಗಿದೆ ಎಂದು ಉತ್ತರಾಖಂಡ ಚಾರ್​ ಧಾಮ್​ ದೇವಸ್ಥಾನ ಮಂಡಳಿ ತಿಳಿಸಿದೆ.

Badrinath temple portals set to open on May 15, preparations in full swing
ಮೇ 15 ರಿಂದ ಶ್ರೀ ಬದ್ರಿನಾಥ್ ಧಾಮ್‌ನ ಪೋರ್ಟಲ್‌ಗಳು ಪ್ರಾರಂಭ

By

Published : May 1, 2020, 3:07 PM IST

ಡೆಹ್ರಾಡೂನ್ (ಉತ್ತರಾಖಂಡ):ಉತ್ತರಾಖಂಡದ ಶ್ರೀ ಬದರಿನಾಥ ಧಾಮದ ಪೋರ್ಟಲ್‌ಗಳು ಮೇ 15 ರಂದು ಪ್ರಾರಂಭವಾಗಲಿದ್ದು, ಸಿದ್ಧತೆಗಳು ಅಂತಿಮ ಹಂತವನ್ನು ತಲುಪಿವೆ.

ದೇವಾಲಯದ ಆವರಣದಿಂದ ಹಿಮವನ್ನು ತೆಗೆಯಲಾಗಿದ್ದು, ನೀರು ಮತ್ತು ವಿದ್ಯುತ್ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರದ ಬಗ್ಗೆಯೂ ವಿಶೇಷ ಗಮನ ನೀಡಲಾಗುತ್ತಿದ್ದು, ಮುಖಗವಸು ಧರಿಸುವುದು ಕೂಡ ಕಡ್ಡಾಯಗೊಳಿಸಲಾಗಿದೆ ಎಂದು ಉತ್ತರಾಖಂಡ ಚಾರ್​ ಧಾಮ್​ ದೇವಸ್ಥಾನ ಮಂಡಳಿ ತಿಳಿಸಿದೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್ ಮುಗಿದ ಕೂಡಲೇ ಚಾರ್​ ಧಾಮ್​ ಯಾತ್ರೆ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಗರ್ವಾಲ್ ಆಯುಕ್ತ ಮತ್ತು ದೇವಸ್ತಾನ ಮಂಡಳಿಯ ಸಿಇಒ ರಾಮನ್ ರವಿನಾಥ್ ಅವರು ಸಿದ್ಧತೆಗಳಿಗೆ ಆದೇಶ ನೀಡಿದ್ದರು. ಈ ಹಿನ್ನೆಲೆ ಈಗಾಗಲೇ ದೇವಸ್ಥಾನ ಮಂಡಳಿಯ ಸಿಬ್ಬಂದಿ ಬದರಿನಾಥ ತಲುಪಿದ್ದಾರೆ ಎಂದು ಉತ್ತರಾಖಂಡ ಚಾರ್​ ಧಾಮ್​ ದೇಗುಲ ಮಂಡಳಿಯ ಮಾಧ್ಯಮ ಉಸ್ತುವಾರಿ ತಿಳಿಸಿದ್ದಾರೆ.

ABOUT THE AUTHOR

...view details