ಕರ್ನಾಟಕ

karnataka

ETV Bharat / bharat

ಅಯೋಧ್ಯೆ ಭೂಮಿ ಪೂಜೆ: ಪ್ರಧಾನಿಗೆ ರಾಖಿ ಕಳುಹಿಸಲಿರುವ ಮುಸ್ಲಿಂ ಮಹಿಳೆ - ಅಯೋಧ್ಯೆ ರಾಮಮಂದಿರ

ಅಯೋಧ್ಯೆಯ ಶ್ರೀರಾಮ ಮಂದಿರ ದೇವಾಲಯದ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಅವರಿಗೆ ಮುಸ್ಲಿಂ ಮಹಿಳೆ ರಾಖಿ ಕಳುಹಿಸಿಕೊಡಲು ಮುಂದಾಗಿದ್ದಾರೆ.

Muslim women
Muslim women

By

Published : Jul 30, 2020, 6:56 PM IST

ಅಯೋಧ್ಯೆ (ಉತ್ತರಪ್ರದೇಶ): ಆಗಸ್ಟ್​​ 5ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹಾಗೂ ಆರ್​​ಎಸ್​ಎಸ್​​​ ಮುಖಂಡ ಇಂದ್ರೇಶ್​ ಕುಮಾರ್​ಗೆ ಮುಸ್ಲಿಂ ಮಹಿಳೆಯೋರ್ವರು ರಾಖಿ ರವಾನೆ ಮಾಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ರಾಮ ಮಂದಿರಕ್ಕೆ ಅಡಿಗಲ್ಲು: 501 ದೀಪ ಬೆಳಗಿಸಿ ಸಂಭ್ರಮಿಸಲಿದೆ ಮುಸ್ಲಿಂ ಕುಟುಂಬ

ಮುಸ್ಲಿಂ ಮಹಿಳೆ ಪ್ರತಿಕ್ರಿಯಿಸಿ, ಆಗಸ್ಟ್​ 5ರಂದು ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮ ಭಾರತದ ಇತಿಹಾಸದ ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಲಿದ್ದು, ನಾವೆಲ್ಲರೂ ಕಾತುರದಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

ಭೂಮಿ ಪೂಜೆ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಅಯೋಧ್ಯೆ ನಗರಿಯ ಜನರು ಈಗಾಗಲೇ ಸಿದ್ಧರಾಗಿದ್ದು, ಉತ್ತರಪ್ರದೇಶದ ಮುಸ್ಲಿಂ ಕುಟುಂಬವೊಂದು ಭೂಮಿ ಪೂಜೆ ವೇಳೆ ಮನೆಯಲ್ಲಿ ಬರೋಬ್ಬರಿ 501 ದೀಪ ಬೆಳಗಿಸಲು ನಿರ್ಧರಿಸಿದೆ.

ABOUT THE AUTHOR

...view details