ಕರ್ನಾಟಕ

karnataka

ETV Bharat / bharat

ಅಯೋಧ್ಯ ವಿವಾದಕ್ಕೆ ಮಧ್ಯಸ್ಥಿಕೆದಾರರು ಅಂತಿಮ... ಇವರ ಹಿನ್ನೆಲೆ ನಿಮಗೆ ತಿಳಿದಿದೆಯಾ ? - ಅಯೋಧ್ಯ ಭೂ ವಿವಾದ

ಸರ್ವೋಚ್ಛ ನ್ಯಾಯಾಲಯವು ದಶಕಗಳ ಹೋರಾಟವಾದ ಅಯೋಧ್ಯ ಭೂ ವಿವಾದಕ್ಕೆ ತೆರೆ ಎಳೆಯಲು ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಮಧ್ಯಸ್ಥಿಕೆದಾರರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿದೆ.

ಅಯೋಧ್ಯ ಭೂ ವಿವಾದಕ್ಕೆ ತೆರೆ ಎಳೆಯಲು ಸಜ್ಜಾದ ಸರ್ವೋಚ್ಛ ನ್ಯಾಯಾಲಯ

By

Published : Mar 8, 2019, 6:39 PM IST

ನವದೆಹಲಿ: ಅಯೋಧ್ಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ದಶಕಗಳ ಹೋರಾಟಕ್ಕೆ ಸರ್ವೋಚ್ಛ ನ್ಯಾಯಾಲಯ ತೆರೆ ಎಳೆಯಲು ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಮಧ್ಯಸ್ಥಿಕೆದಾರರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿದೆ.

ಮಹತ್ವದ ಆದೇಶದಲ್ಲಿ ಜಸ್ಟೀಸ್ ಎಫ್​.ಎಂ.ಖಲೀಫುಲ್ಲಾ (ನಿವೃತ್ತ) ರನ್ನು ಸಂಧಾನ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಶ್ರೀ ಶ್ರೀ ರವಿಶಂಕರ್​ ಗುರೂಜಿ ಹಾಗೂ ಅಡ್ವೋಕೇಟ್​ ಶ್ರೀರಾಮ್​ ಪಂಚು ಉಳಿದ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

ಸದ್ಯ ಆಯ್ಕೆಯಾಗಿರುವ ಸಂಧಾನ ಸಮಿತಿಯ ಪ್ರಮುಖರ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಇಲ್ಲಿದೆ..

ಜಸ್ಟೀಸ್ ಎಫ್​.ಎಂ.ಖಲೀಫುಲ್ಲಾ:

68 ವರ್ಷದ ಜಸ್ಟೀಸ್​ ಎಫ್​.ಎಂ.ಖಲೀಫುಲ್ಲಾ ದಿ.ಎಂ.ಫಕೀರ್​​​ ಮೊಹಮ್ಮದ್ ಅವರ ಪುತ್ರ. 1975ರಲ್ಲಿ ಆಗಸ್ಟ್​ನಲ್ಲಿ ಅಡ್ವೋಕೇಟ್​ ಆಗಿ ವೃತ್ತಿ ಪ್ರಾರಂಭ ಮಾಡಿದ್ದರು. 2000 ಇಸವಿಯಲ್ಲಿ ಜಸ್ಟೀಸ್ ಖಲೀಫುಲ್ಲಾ ಮದ್ರಾಸ್ ಹೈಕೋರ್ಟ್​ನ ಖಾಯಂ ನ್ಯಾಯಮೂರ್ತಿಯಾಗಿ ನಿಯುಕ್ತಿಗೊಂಡಿದ್ದರು. 2 ಎಪ್ರಿಲ್ 2012ರಲ್ಲಿ ಖಲೀಫುಲ್ಲಾ ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದರು. 22 ಜುಲೈ 2016ರಲ್ಲಿ ಹುದ್ದೆಯಿಂದ ನಿವೃತ್ತಿ ಹೊಂದಿದರು.

ಶ್ರೀ ಶ್ರೀ ರವಿಶಂಕರ್​ ಗುರೂಜಿ:

62 ವರ್ಷದ ಶ್ರೀ ಶ್ರೀ ರವಿಶಂಕರ್​ ಗುರೂಜಿ ಆಧ್ಯಾತ್ಮ ಲೋಕದ ಪರಿಚಿತ ಹೆಸರು. ದೇಶ-ವಿದೇಶಗಳಲ್ಲಿ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಆರ್ಟ್​ ಆಫ್​ ಲಿವಿಂಗ್​ ಮೂಲಕ ಶ್ರೀ ಶ್ರೀ ರವಿಶಂಕರ್​ ಗುರೂಜಿ ಜನಪ್ರಿಯತೆ ಗಳಿಸಿದ್ದಾರೆ.

ಶ್ರೀರಾಮ್​ ಪಂಚು:

69 ವರ್ಷದ ಹಿರಿಯ ಅಡ್ವೋಕೇಟ್ ಆಗಿರುವ ಶ್ರೀರಾಮ್ ಪಂಚು 2005ರಲ್ಲಿ ಭಾರತದಲ್ಲಿ ಮೊದಲ ಕೋರ್ಟ್​ಗೆ ಒಳಪಟ್ಟ ಮಧ್ಯಸ್ಥಿಕೆ ಚೇಂಬರ್​ ಸ್ಥಾಪನೆ ಮಾಡಿದ್ದರು. ಸಂಧಾನದ ಕುರಿತಂತೆ ಪಂಚು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಸುಪ್ರೀಂಕೋರ್ಟ್​ ಇವರನ್ನು ವಿಶಿಷ್ಟ ಮಧ್ಯಸ್ಥಿಕೆದಾರ ಎಂದು ಹೊಗಳಿತ್ತು. ಭಾರತದ ಅತ್ಯುತ್ತಮ ಮಧ್ಯಸ್ಥಿಕೆದಾರ ಎಂದು ಕರೆಸಿಕೊಳ್ಳುವ ಶ್ರೀರಾಮ್ ಪಂಚು ಸದ್ಯ ದಶಕಗಳ ಹೋರಾಟಕ್ಕೆ ಸುಖಾಂತ್ಯ ಹಾಡುತ್ತಾರಾ ಎನ್ನುವ ಕುತೂಹಲ ಮೂಡಿಸಿದ್ದಾರೆ.

ABOUT THE AUTHOR

...view details