ನ್ಯೂಯಾರ್ಕ್/ ವಿಶ್ವಸಂಸ್ಥೆ: ವಿಶ್ವಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಅಂದಾಜಿನ ಪ್ರಕಾರ, 2019ರಲ್ಲಿ 17.5 ಮಿಲಿಯನ್ ಪ್ರಬಲ ವಲಸೆಗಾರರೊಂದಿಗೆ ಭಾರತವು ಅಂತಾರಾಷ್ಟ್ರೀಯ ವಲಸಿಗರ ಮೂಲ ದೇಶವೆಂದು ತಿಳಿಸಿದೆ.
ಜಾಗತಿಕವಾಗಿ ವಲಸೆ ಹೋದವರು ಸಂಖ್ಯೆ ಅಂದಾಜು 272 ಮಿಲಿಯನ್ ತಲುಪಿದೆ. ಇಂಟರ್ನ್ಯಾಷನಲ್ ಮೈಗ್ರಂಟ್ ಸ್ಟಾಕ್- 2019, ಯುಎನ್ನ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ (ಡಿಇಎಸ್ಎ) ಜನಸಂಖ್ಯಾ ವಿಭಾಗವು ಇಂದು ಈ ವರದಿಯನ್ನು ಬಿಡುಗಡೆ ಮಾಡಿದೆ.
ಎಲ್ಲ ಅಂತಾರಾಷ್ಟ್ರೀಯ ವಲಸಿಗರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಅಗ್ರ 10 ದೇಶಗಳು ಹೊಂದಿವೆ. 2019ರಲ್ಲಿ 17.5 ಮಿಲಿಯನ್ ಜನರು ವಲಸೆ ಹೋಗಿ ನಾನಾ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದರಲ್ಲಿ ಭಾರತ ಅಂತಾರಾಷ್ಟ್ರೀಯ ವಲಸಿಗರ ಮೂಲ ದೇಶವಾಗಿದ್ದು, ಮೆಕ್ಸಿಕೊದಿಂದ ವಲಸೆ ಬಂದವರು ಎರಡನೇ ಅತಿದೊಡ್ಡ ವಲಸೆಗಾರರನ್ನು (11.8 ಮಿಲಿಯನ್) ಎಂಬ ಹೆಗ್ಗಳಿಕೆ ಪಡೆದಿವೆ.
ಭಾರತ ಮತ್ತು ಮೆಕ್ಸಿಕೊ ಬಳಿಕ ಚೀನಾ (10.7 ಮಿಲಿಯನ್), ರಷ್ಯಾ (10.5 ಮಿಲಿಯನ್), ಸಿರಿಯಾ (8.2 ಮಿಲಿಯನ್), ಬಾಂಗ್ಲಾದೇಶ (7.8 ಮಿಲಿಯನ್), ಪಾಕಿಸ್ತಾನ (6.3 ಮಿಲಿಯನ್), ಉಕ್ರೇನ್ (5.9 ಮಿಲಿಯನ್), ಫಿಲಿಪೈನ್ಸ್ (5.4 ಮಿಲಿಯನ್) ಹಾಗೂ ಅಫ್ಘಾನಿಸ್ತಾನ (5.1 ಮಿಲಿಯನ್) ಪಡೆದಿವೆ.