ಕರ್ನಾಟಕ

karnataka

ETV Bharat / bharat

ಗುರುವಾರದ ನಿಮ್ಮ ರಾಶಿಫಲ ಹೇಗಿದೆ? - ಮಿಥುನ

ಮೇಷ: ಭಾವನಾತ್ಮಕ ವಿಷಯಗಳು ನಿಮಗೆ ಎದುರಾಗುತ್ತವೆ. ನೀವು ದುಃಖಿತರಾಗುವ ಸಾಧ್ಯತೆಯಿದೆ.

ರಾಶಿಫಲ

By

Published : Jun 27, 2019, 6:01 AM IST

ವೃಷಭ: ನಿಮ್ಮಲ್ಲಿ ಹಬ್ಬದ ಉತ್ಸಾಹ ಕಾಣುತ್ತದೆ. ಈ ಮಧ್ಯಾಹ್ನ ಯಶಸ್ಸು ನಿಮ್ಮ ಮನೆಬಾಗಿಲು ಬಡಿಯುತ್ತದೆ. ನಿಮ್ಮ ಆಲೋಚನೆಗಳು ಆಶಾವಾದರೊಂದಿಗೆ ಸೇರುತ್ತವೆ ತಡರಾತ್ರಿಯವರೆಗೂ ಪಾರ್ಟಿಯಲ್ಲಿ ನೀವು ಮುಳುಗುತ್ತೀರಿ.

ಮಿಥುನ: ನಿಮ್ಮ ಸಹೋದ್ಯೋಗಿಗಳೊಂದಿಗೆ ಮ್ಯಾರಥಾನ್ ಸಭೆ ನಡೆಸುವಿರಿ. ಮೀಟಿಂಗ್ ಗಡುವುಗಳು ಮೀರುತ್ತಿರುವುದು ಮತ್ತು ಸಂಗಾತಿಯ ಬೇಡಿಕೆಗಳು ನಿಮ್ಮನ್ನು ದಿನದ ಅಂತ್ಯಕ್ಕೆ ಕೊಂಚ ಒತ್ತಡದಲ್ಲಿರಿಸುತ್ತವೆ.ಆದರೆ ನೀವು ಸಮಯವನ್ನು ವ್ಯಾಪಾರ,ಮನೆ ಮತ್ತು ಸಂತೋಷದ ನಡುವೆ ವಿಂಗಡಿಸುವುದರಲ್ಲಿ ಪರಿಣಿತರು.

ಕರ್ಕಾಟಕ: ನೀವು ಇಡೀ ದಿನ ಗೃಹಕೃತ್ಯಗಳಲ್ಲಿ ಕಳೆಯುತ್ತೀರಿ,ಮತ್ತು ಜವಾಬ್ದಾರಿಗಳ ಹೊರೆ ನಿಭಾಯಿಸುತ್ತೀರಿ.ಸಂಜೆಯ ವೇಳೆಗೆ,ನೀವು ಪ್ರೀತಿಪಾತ್ರರಿಗೆ ವಿಶೇಷ ಗಮನ ನೀಡಿ ಪ್ರಭಾವಿಸುತ್ತೀರಿ; ನೀವು ಇತರರನ್ನೂ ಸಂತೋಷಗೊಳಿಸುತ್ತೀರಿ.

ಸಿಂಹ: ನೀವು ಇತರರಿಗೆ ನೆರವು ನೀಡುವ ಮೂಡ್​​ನಲ್ಲಿದ್ದೀರಿ;ಆದರೆ ನೀವು ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ.ದಿನದ ನಂತರದಲ್ಲಿ ನಿಮ್ಮ ಅನುಮಾನಗಳು ಕರಗಿ ಹೋಗುತ್ತವೆ. ನೀವು ಇಂದು ಬಯಸಿದ ಫಲಿತಾಂಶಗಳನ್ನು ಪಡೆಯಲು ಹೆಚ್ಚು ಶ್ರಮಿಸಬೇಕು.

ಕನ್ಯಾ:ನಿಮ್ಮ ಗಮನದ ಮಟ್ಟ ಇಂದು ಅತ್ಯುನ್ನತ ಮಟ್ಟದಲ್ಲಿದೆ. ಕೆಲಸದಲ್ಲಿ ಆನಂದ ಅನುಭವಿಸುತ್ತೀರಿ.ನಿಮ್ಮ ಕೆಲಸಗಳನ್ನು ವೇಗವಾಗಿ ಮತ್ತು ಸಮರ್ಥವಾಗಿ ಮುಗಿಸುತ್ತೀರಿ. ಕಥೆಯಲ್ಲಿ ತಿರುವು ಬರಬಹುದು;ಚಿಂತೆ ಬೇಡ, ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದು ನಿಮ್ಮ ಪ್ರೇಮ ಪ್ರಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.

ತುಲಾ: ಎಲ್ಲ ಸಾಧನೆಗಳೂ ಮುಂಚೆಯೇ ರೂಪಿಸಿದ್ದವು. ಆದ್ದರಿಂದ ನಿಮ್ಮ ಯಶಸ್ಸಿನ ನಕ್ಷೆಯನ್ನು ಇತರರೊಂದಿಗೆ ಇಂದು ಹಂಚಿಕೊಳ್ಳಿ.ನೀವು ಮಧ್ಯಾಹ್ನ ಕೆಲಸದಲ್ಲಿ ವಿಧೇಯ ಮತ್ತು ಸಹಕಾರದಲ್ಲಿರುತ್ತೀರಿ;ಇದರ ಫಲಿತಾಂಶದಿಂದ ನಿಮ್ಮ ಸಾಮಾಜಿಕ ಸಂಪರ್ಕಗಳು ಗಮನಾರ್ಹವಾಗಿ ಸಂಜೆ ಹೆಚ್ಚಾಗುತ್ತವೆ.ಎರಡರ ನಡುವೆ ಸಮಾನವಾಗಿ ಸಮಯ ಹಂಚುವುದು ಮುಖ್ಯ.

ವೃಶ್ಚಿಕ: ನೀವು ನಿಮ್ಮದೇ ರೀತಿಯಲ್ಲಿ ಮೀಡಿಯಾ ಮೊಗಲ್ ಆಗಲು ಬಯಸಿದ್ದೀರಿ.ನಿಮ್ಮ ಸುತ್ತಲಿನ ಜನರು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಗಳನ್ನು ಪ್ರಶಂಸೆ ಮಾಡುತ್ತಾರೆ.ಆದರೆ, ನೀವು ಬಯಸಿದ್ದು ಪಡೆಯಲು ಹೆಚ್ಚು ಹಣ ತೆರಬೇಕು.ಅಸಾಧಾರಣ ಬಂಧ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಒಗ್ಗೂಡಿಸಿದ್ದು ಹಿಂದೆಂದಿಗಿಂತ ಹತ್ತಿರವಾಗಿಸಿದೆ.

ಧನು: ವ್ಯಾಪಾರ ಸಂಬಂಧಿತ ಕೆಲಸದಲ್ಲಿ ಚಲನೆಯಲ್ಲಿರುವುದನ್ನು ನಿರೀಕ್ಷಿಸಿ.ಹಣಕಾಸಿನ ವಿಷಯಗಳು ಮಧ್ಯಾಹ್ನದ ಪ್ರಮುಖ ಸಮಸ್ಯೆಯಾಗುತ್ತದೆ.ತಂಡದ ನಾಯಕರಾಗಿರಿ ಮತ್ತು ನಿಮ್ಮ ಸಹ-ಕೆಲಸಗಾರರ ದಾರಿಯಲ್ಲಿ ಬರುವ ಎಲ್ಲವನ್ನೂ ಹಿಡಿದುಕೊಳ್ಳಿ.ಸಂಜೆಯ ವೇಳೆಗೆ ರೊಮ್ಯಾಂಟಿಕ್ ಬಯಕೆಯಲ್ಲಿ ಉತ್ಸಾಹದಲ್ಲಿರಿ.

ಮಕರ: ನಿಮ್ಮ ಸಂಗಾತಿ ನಿಮಗೆ ಹಲವು ಬಾರಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಿ ತಮ್ಮ ಕುರಿತು ಕಾಳಜಿ ವಹಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಇಂದು ಆತ/ಆಕೆ ಸಂತೋಷದಿಂದ ಇರುತ್ತಾರೆ, ಏಕೆಂದರೆ ನೀವು ನಿಮ್ಮ ಪ್ರಿಯತಮೆಯನ್ನು ಡಿನ್ನರ್ ಗೆ ಕರೆದೊಯ್ಯುತ್ತೀರಿ. ಕೆಲಸದಲ್ಲಿ ವಿಜೇತರಾಗಿರಿ, ನಿಮ್ಮ ಸ್ಪರ್ಧಿಗಳನ್ನು ಮೀರುತ್ತೀರಿ ಮತ್ತು ನಿಮ್ಮ ಬಾಸ್ ಹೊಗಳುತ್ತಾರೆ.

ಕುಂಭ: ನೀವು ಅಂತಿಮವಾಗಿ ನಿಮ್ಮ ಹಳೆಯ ಮಿತ್ರರೊಂದಿಗೆ ಸಂಪರ್ಕ ಸಾಧಿಸುತ್ತೀರಿ.ಕೆಲಸದಲ್ಲಿ ನಿಮ್ಮ ಸಾರ್ವಜನಿಕ ಸಂಪರ್ಕ ಕೌಶಲ್ಯಗಳು ದಿಢೀರ್ ಎಂದು ಹೆಚ್ಚಾಗುತ್ತವೆ ಮತ್ತು ನಿಮ್ಮ ವಿರೋಧಿಗಳೂ ನಿಮಗೆ ಸಲ್ಯೂಟ್ ಮಾಡುತ್ತಾರೆ! ಸಹಜವಾಗಿ ಅತ್ಯಂತ ಸಂತೋಷ ಹೊಂದಿರುವುದು ನಿಮ್ಮ ಪ್ರೀತಿಪಾತ್ರರು. ಅವರು ನೀವು ಹೇಳಿದ ಎಲ್ಲವನ್ನೂ ಶ್ಲಾಘಿಸುತ್ತಾರೆ. ಕೊನೆಯಾಗುವ ಮೊದಲು ಆನಂದಿಸಿ.

ಮೀನ:ಈ ದಿನ ಕೆಲಸದ ದೃಷ್ಟಿಯಿಂದ ಸಾಕಷ್ಟು ಒತ್ತಡ ತುಂಬಿದೆ. ನೀವು ನಿಮ್ಮ ಅದ್ಭುತ ಬುದ್ಧಿಶಕ್ತಿಯಿಂದ ಮತ್ತು ಮನ ಒಲಿಸುವ ಶಕ್ತಿಯಿಂದ ಸ್ಪರ್ಧಿಗಳಿಗಿಂತ ಮುಂದಿರುತ್ತೀರಿ. ನೀವು ಇಂದು ಪ್ರಾಜೆಕ್ಟ್​​ಗಳನ್ನು ನಿಭಾಯಿಸುವ ರೀತಿಗೆ ಹಲವು ಪುರಸ್ಕಾರಗಳನ್ನು ಪಡೆಯುತ್ತೀರಿ.

ABOUT THE AUTHOR

...view details