ವೃಷಭ : ನೀವು ಸ್ವಯಂ ಮೆಚ್ಚುಗೆ ಭಾವನೆ ಹೊಂದುವುದರಿಂದ ಯಾರ ಕೈಗೂ ಸಿಗುವುದಿಲ್ಲ.
ಮಿಥುನ:ನಿಮ್ಮ ಸ್ನೇಹಿತರು ನಿಮ್ಮನ್ನು ನಾಯಕ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯನ್ನಾಗಿ ಕಾಣುತ್ತಾರೆ. ನಿಮಗೆ ನಿಮ್ಮ ಹೃದಯ ಏನನ್ನು ಬಯಸುತ್ತದೋ ಅದನ್ನು ಪಡೆಯುವಲ್ಲಿ ನೀವು ಗಮನ ನೀಡಿರಬಹುದು. ಕೆಲ ಕಾಲದಿಂದ ಉತ್ತರ ದೊರೆಯದೆ ಉಳಿದ ಅನುಮಾನಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.
ಕರ್ಕಾಟಕ:ದೇವರ ಆಶೀರ್ವಾದ ನಿಮಗೆ ಯಶಸ್ಸು ಗಳಿಸಲು ನೆರವಾಗುತ್ತದೆ. ಇದು ವಿದ್ಯಾರ್ಥಿಗಳು ಇತರರಿಗಿಂತ ಉತ್ತಮ ಸಾಧನೆ ಮಾಡಲು ಸುವರ್ಣ ಸಮಯ. ಕಲ್ಪನಾಶಕ್ತಿ ಕಾಡಿನ ಬೆಂಕಿಯಂತೆ ನಿಮ್ಮಲ್ಲಿ ಉರಿಯುತ್ತಿದೆ ಮತ್ತು ಇಂದು ಎಲ್ಲವೂ ನಿಮ್ಮ ದಾರಿಯಲ್ಲಿ ಮುನ್ನಡೆಯುವಂತೆ ಕಾಣುತ್ತಿವೆ.
ಸಿಂಹ: ನೀವು ಇಂದು ನಿಮ್ಮ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಕೆಲಸದಲ್ಲಿ ಕಳೆದರೆ, ನಿಮಗೆ ಆಶ್ಚರ್ಯಗೊಳಿಸಲು ಸಕಾರಾತ್ಮಕ ಫಲಿತಾಂಶಗಳು ಕಾಯುತ್ತಿವೆ. ಕಚೇರಿಯಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಬುದ್ಧತೆ ಮತ್ತು ಅರ್ಥ ಮಾಡಿಕೊಳ್ಳುವುದು ಅಗತ್ಯ. ಈ ಪವಿತ್ರ ದಿನದಂದು ವ್ಯಾಪಾರವು ಮಹತ್ತರ ಪುರಸ್ಕಾರಗಳು ಹಾಗೂ ಲಾಭಗಳನ್ನು ತಂದುಕೊಡಲಿದೆ.
ಕನ್ಯಾ: ಇಲ್ಲಿಯವರೆಗೂ ನೀವು ತಡೆಹಿಡಿದಿದ್ದ ಭಾವನೆಗಳು ಇಂದು ಹೊರಗಡೆ ನುಗ್ಗಲು ದಾರಿ ಕಂಡುಕೊಳ್ಳಬಹುದು. ನೀವು ಕೈಗೆ ಸಿಗುವ ವಸ್ತುಗಳ ಕುರಿತು ಭಾವನೆಗಳನ್ನು ಬೆಳೆಸಿಕೊಂಡು ಅವುಗಳೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬಹುದು. ನೀವಿರುವ ಪರಿಸರ ನಿಮ್ಮ ಇಷ್ಟಕ್ಕೆ ಅನುಗುಣವಾಗಿಲ್ಲದೇ ಇರುವುದರಿಂದ ವಿಶ್ರಾಂತಿರಾಹಿತ್ಯದ ಭಾವನೆ ಹೊಂದಬಹುದು.
ತುಲಾ:ಲೈಟ್ಸ್, ಕ್ಯಾಮರಾ, ಆ್ಯಕ್ಷನ್! ಈ ಅತ್ಯಂತ ಉತ್ತೇಜನದ ಮತ್ತು ಸ್ಫೂರ್ತಿಯುತ ದಿನದಲ್ಲಿ ಲೈಮ್ ಲೈಟ್ ನಿಮ್ಮ ಕಡೆ ತಿರುಗಿರುವುದರಿಂದ ಜನರ ಮೆಚ್ಚುಗೆಯನ್ನು ಗಳಿಸಲು ಸಜ್ಜಾಗಿರಿ. ಇಂದು ಆವಿಷ್ಕಾರಕ ಯೋಜನೆಗಳು, ಅದರಲ್ಲಿಯೂ ತಮಗೆ ತಾವೇ ಬಾಸ್ ಬಯಸುವವರು ಮತ್ತು ಸ್ವಯಂ ಹಣಕಾಸು ಹೂಡಿಕೆ ಆಲೋಚನೆಗಳನ್ನು ಹೊಂದಿರುವವರಿಗೆ ಉತ್ತೇಜಕಾರಕ ದಿನವಾಗಿದೆ.
ವೃಶ್ಚಿಕ:ಮತ್ತಷ್ಟು ಆಳವಾಗಿ ಹುಡುಕಾಟದಲ್ಲಿ ತೊಡಗಿರಿ. ಕರ್ಮದ ಪರಿಣಾಮವಿರುತ್ತದೆ, ಆದರೆ, ಫಲಿತಾಂಶ ಕುರಿತು ಹೆಚ್ಚು ಆಲೋಚಿಸಬೇಡಿ. ಜಂಟಿ ಸಹಯೋಗಗಳ ಕುರಿತು ಇಂದು ಕಾದು ನೋಡುವ ವಿಧಾನ ಅನುಸರಿಸಿ.
ಧನು:ಸಮಸ್ಯೆಗಳು ಇಂದು ನಿಮ್ಮನ್ನು ಮೂಲೆಗೆ ತಳ್ಳುತ್ತವೆ. ಆದರೆ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಅವುಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಅಂತಿಮ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ತಡವಾಗುವುದನ್ನು ನಿರೀಕ್ಷಿಸಿ. ದಿನ ಅಂತ್ಯವಾದಂತೆ ಉಪಯುಕ್ತ ಫಲಿತಾಂಶಗಳನ್ನು ನಿರೀಕ್ಷಿಸಿ.
ಮಕರ:ಎಲ್ಲ ದಿನಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಮತ್ತು, ಇಂದು ಅತ್ಯಂತ ಗೊಂದಲದ ಭಾವನೆಗೆ ಒಳಗಾದ ದಿನವಾಗಿದೆ. ನೀವು ಋಣಾತ್ಮಕ ಭಾವನೆಗಳಿಂದ ಹೊರಬರಲು ಸಾಧ್ಯವಿಲ್ಲ, ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ತಳಹದಿ ನಿರ್ಮಿಸುತ್ತದೆ.
ಕುಂಭ:ಸಮಾಜದ ವಿವಿಧ ವಲಯಗಳ ಜನರ ಭೇಟಿ, ಅವರೊಂದಿಗೆ ಒಳ್ಳೆಯ ಮಾತುಕತೆ ಮತ್ತು ನಿಮ್ಮ ಜ್ಞಾನದ ವಿಸ್ತರಣೆ-ಇವು ಇಂದು ನಿಮಗಾಗಿ ಇರುವ ಪ್ರಮುಖಾಂಶಗಳು. ನಿಮ್ಮ ಶಕ್ತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ, ಆದರೆ ಇದು ನಿಮ್ಮನ್ನು ಸುಸ್ತಾಗಿಸಲೂಬಹುದು.
ಮೀನ: ವ್ಯಾಪಾರದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳಿಂದ ತಳಮಳಗೊಳ್ಳುತ್ತಿದ್ದೀರಾ? ನಿಮ್ಮ ಸಮಸ್ಯೆಯ ಮೂಲವನ್ನು ಎದುರಿಸಿ ಮತ್ತು ನಿಮ್ಮ ಹೊಣೆಗಾರಿಕೆಗಳ ಕುರಿತು ತಾಳ್ಮೆ ಮತ್ತು ನಂಬಿಕೆ ಇಟ್ಟುಕೊಳ್ಳಿ. ನಿಮ್ಮ ದಾರಿಯಲ್ಲಿ ಒಳ್ಳೆಯ ವಿಷಯಗಳು ಹಾಗೂ ಒಳ್ಳೆಯ ಸಮಯ ಬರುತ್ತದೆ.