ಕರ್ನಾಟಕ

karnataka

ETV Bharat / bharat

ಶುಕ್ರವಾರ ಭವಿಷ್ಯ : ವೃಷಭ ರಾಶಿಯವರು ಭಾವುಕತೆಗೆ ಒಳಗಾಗದಿರಿ; ಏಕಂದರೆ? - ಕುಂಭ

ಶುಕ್ರವಾರದ ರಾಶಿಫಲ ಇಲ್ಲಿದೆ ನೋಡಿ

astrology

By

Published : Aug 16, 2019, 5:22 AM IST

ಮೇಷ: ಇಂದು ನೀವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುತ್ತೀರಿ. ನೀವು ಗಿಡ ನೆಡಬಹುದು, ನೆರೆಹೊರೆಯನ್ನು ಸ್ವಚ್ಛವಾಗಿರಿಸಲು ಬೀದಿಯಲ್ಲಿನ ಕಸ ತೆಗೆಯಬಹುದು. ಒಳ್ಳೆಯ ಪರಿಸರ ನಿರ್ಮಾಣಕ್ಕಾಗಿ ಹೆಚ್ಚು ಚಟುವಟಿಕೆಗಳನ್ನು ಮಾಡಲು ಬಯಸಿದ್ದೀರಿ.

ವೃಷಭ: ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಕಾರ್ಯ ಮತ್ತು ಚಟುವಟಿಕೆ ನಿಧಾನಗೊಳ್ಳುತ್ತವೆ. ಭಾವುಕ ಅಥವಾ ಭಾವನಾತ್ಮಕತೆ ಹೊಂದದೇ ಇರಲು ಪ್ರಯತ್ನಿಸಿ, ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಸುಲಭವಾಗಿ ಮರೆಯದಂತೆ ಮಾಡುತ್ತದೆ.

ಮಿಥುನ:ನೀವು ಮಿತ್ರರು ಮತ್ತು ಕುಟುಂಬದೊಂದಿಗೆ ಟ್ರಿಪ್ ಹೋಗಲು ಬಯಸಿದ್ದೀರಿ. ಈ ಟ್ರಿಪ್ ಅನ್ನು ಕೆಲ ಕಾಲಗಳಿಂದಲೂ ಯೋಜಿಸುತ್ತಿದ್ದೀರಿ. ಈ ದಿನ ವಿನೋದ, ಉಲ್ಲಾಸ ಮತ್ತು ಮನರಂಜನೆಯಿಂದ ಕೂಡಿರುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ.

ಕರ್ಕಾಟಕ:ನೀವು ಎಲ್ಲದಕ್ಕಿಂತ ನಿಮ್ಮ ಉದ್ಯೋಗಕ್ಕೆ ಆದ್ಯತೆ ನೀಡಬೇಕು. ನೀವು ನಿಮಗೆ ನೀಡಲಾದ ಕೆಲಸವನ್ನು ವೇಗವಾಗಿ ಅತ್ಯಂತ ಏಕಾಗ್ರತೆ ಮತ್ತು ಬದ್ಧತೆಯಿಂದ ಮುಗಿಸುತ್ತೀರಿ. ಕೆಲಸದಲ್ಲಿ ನಿಮ್ಮ ಶಕ್ತಿ ಅತ್ಯಂತ ಹೆಚ್ಚಾಗಿರುತ್ತದೆ. ನೀವು ನಿಮ್ಮ ಮಿತ್ರರಿಗೆ ಮಹತ್ತರ ಪ್ರಾಮುಖ್ಯತೆ ನೀಡುತ್ತೀರಿ.

ಸಿಂಹ: ನೀವು ಇಂದು ನಿಮಗೆ ಒಳ್ಳೆಯದಾಗುತ್ತದೋ ಇಲ್ಲವೋ ಎಂದು ಆತಂಕಗೊಂಡಿದ್ದೀರಿ. ಆದರೆ ನಿಮಗೆ ಆನಂದದ ಸುದ್ದಿ ಇದೆ. ಈ ದಿನ ನಿಮಗೆ ಪುರಸ್ಕಾರಗಳನ್ನು ಮಾತ್ರ ನೀಡುತ್ತದೆ. ಇದು ನಿಮ್ಮ ಕೆಲಸದ ಸ್ಥಳಕ್ಕೆ ಅತ್ಯಂತ ನಿಜವಾಗಿದೆ, ಅಲ್ಲಿ ನಿಮ್ಮ ಆಂತರಿಕ ಪ್ರತಿಭೆಗಳನ್ನು ಇಂದು ಗುರುತಿಸಲಾಗುತ್ತದೆ.

ಕನ್ಯಾ:ನಿಮ್ಮ ಹೊಂದಿಕೆ ಮತ್ತು ಕಲಾತ್ಮಕ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಸಕಾರಾತ್ಮ ಚಿಂತನೆಯಲ್ಲಿದ್ದೀರಿ, ಮತ್ತು ಉತ್ಸಾಹ ಹರಡುತ್ತೀರಿ. ಆದರೆ ನಿಮ್ಮ ಕಲ್ಪನಾಶಕ್ತಿ ಯಾವುದೇ ಒತ್ತಡ ಅಥವಾ ಆಯಾಸ ಇಲ್ಲದಾಗ ಮಾತ್ರ ಅರಳುತ್ತದೆ.

ತುಲಾ:ನೀವು ದೊಡ್ಡ ಗುರಿಯನ್ನು ಇರಿಸಿಕೊಂಡಾಗ ಸಣ್ಣ ವಿಷಯಗಳು ನಿಮಗೆ ಹೆಚ್ಚು ಕಿರಿಕಿರಿ ಮಾಡುತ್ತವೆ. ಆದರೆ, ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಬಿಡಬೇಡಿ, ಏಕೆಂದರೆ ಇಂದು ನೀವು ಹೊಸ ಆಲೋಚನೆಗಳನ್ನು ಸ್ವೀಕರಿಸುತ್ತಿರುತ್ತೀರಿ. ನೀವು ಗ್ರಹಿಸಬಲ್ಲ ವಿಷಯಗಳಿಗೆ ಅವಕಾಶ ನೀಡಿ ಮತ್ತು ಸಮತೋಲನ ಕಾಪಾಡಿಕೊಳ್ಳಿ.

ವೃಶ್ಚಿಕ:ನೀವು ಈಗ ಎಲ್ಲ ಎತ್ತರಗಳನ್ನೂ ಅನುಭವಿಸಿದ್ದೀರಿ. ಇಂದು ವೃತ್ತಿ ಜಗತ್ತಿನಲ್ಲಿ ಇಳಿಕೆಯನ್ನೂ ಕಾಣಲಿದ್ದೀರಿ. ನಿಮ್ಮ ಬಾಸ್, ಸಹೋದ್ಯೋಗಿಗಳು ಮತ್ತು ನಿಮ್ಮ ನಡುವಿನ ಕೆಮಿಸ್ಟ್ರಿ ಕೊಂಚ ಅಲುಗಾಡಿದೆ. ಆದರೆ, ಸಂಜೆಯ ವೇಳೆಗೆ ನೀವು ಸರಿಪಡಿಸಿಕೊಳ್ಳುತ್ತೀರಿ. ಹೊಸಬರು ವೃತ್ತಿಯ ಅವಕಾಶಗಳನ್ನು ಎದುರು ನೋಡುತ್ತಾರೆ.

ಧನು: ಹಣ ಇಂದು ಸುಲಭವಾಗಿ ಕೈಜಾರಿ ಹೋಗುತ್ತದೆ. ಅನಗತ್ಯ ವೆಚ್ಚ ನಿವಾರಿಸಲು ಯತ್ನಿಸಿ. ಇಡೀ ದಿನ ಹಣ ನಿರ್ವಹಣೆಗೆ ಹೋಗುತ್ತದೆ, ಸಂಜೆ ಅದರೊಂದಿಗೆ ಸಾಕಷ್ಟು ಸಕಾರಾತ್ಮಕ ಶಕ್ತಿ ತರುತ್ತದೆ. ನೀವು ಕುಳಿತು ನಿರಾಳರಾಗಲು ಬಯಸುತ್ತೀರಿ.

ಮಕರ:ವಿಶ್ವಾಸದ ಕೊರತೆ ದಿನದ ಮೊದಲರ್ಧದಲ್ಲಿ ನಿಮಗೆ ಮ್ಲಾನವದನರನ್ನಾಗಿಸುತ್ತದೆ. ಮತ್ತು ಅದಕ್ಕೆ ಪೂರಕವಾಗಿ, ನೀವು ಪೂರ್ಣಕಾಲಿಕ ಕೆಲಸ ನೀಡಲಾದ ಕಂಪನಿಯಲ್ಲದೆ ಬೇರೆ ಕಡೆ ಕೆಲಸದಲ್ಲಿರುತ್ತೀರಿ. ಸಂಕಟದ ಮುಖ ಸಂಜೆಗೆ ಸಂತೋಷದತ್ತ ಹೊರಳುತ್ತದೆ. ಮತ್ತು ನೀವು ಮಿತ್ರರು ಹಾಗೂ ಬಂಧುಗಳೊಂದಿಗೆ ಬೆರೆತು ಒಳ್ಳೆಯ ಸಮಯ ಕಳೆಯುತ್ತೀರಿ.

ಕುಂಭ:ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ.

ಮೀನ:ನೀವು ಹಣಕಾಸಿನ ಬಗ್ಗೆ ಯೋಜಿಸುವುದು ಅಗತ್ಯ, ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸುತ್ತೀರಿ. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗುತ್ತೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

ABOUT THE AUTHOR

...view details