ಕರ್ನಾಟಕ

karnataka

ETV Bharat / bharat

'ನಿಮ್ಮ ತಂದೆ - ತಾಯಿ ಶಾಲೆಗಳನ್ನು ನಿರ್ಮಿಸಿದ್ದಾರೆಯೇ?': ತೇಜಸ್ವಿ ವಿರುದ್ಧ ನಿತೀಶ್ ವಾಗ್ದಾಳಿ - ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್

"ನಿಮ್ಮ ತಂದೆ ಅಥವಾ ತಾಯಿ (ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ) ಯಾವುದಾದರೂ ಶಾಲೆ ಅಥವಾ ಕಾಲೇಜು ಕಟ್ಟಿಸಿದ್ದಾರೆಯೇ ಎಂದು ಕೇಳಿ" ಎಂದು ನಿತೀಶ್ ಕುಮಾರ್ ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮೇಲೆ ಪರೋಕ್ಷ ದಾಳಿ ನಡೆಸಿದರು.

nithish
nithish

By

Published : Oct 24, 2020, 9:36 PM IST

ಬೇಗುಸರಾಯ್ (ಬಿಹಾರ): ವಿಧಾನಸಭೆಯ ಮುಖಾಮುಖಿ ಪ್ರಾರಂಭವಾಗಿದ್ದು, ರಾಜಕೀಯ ಯುದ್ಧಭೂಮಿ ಬಿಸಿಯಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿವೆ. ಬೆಗುಸರೈನಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮೇಲೆ ಪರೋಕ್ಷ ದಾಳಿ ನಡೆಸಿದರು.

"ನಿಮ್ಮ ತಂದೆ ಅಥವಾ ತಾಯಿ (ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ) ಯಾವುದಾದರೂ ಶಾಲೆ ಅಥವಾ ಕಾಲೇಜು ಕಟ್ಟಿಸಿದ್ದಾರೆಯೇ ಎಂದು ಕೇಳಿ" ಎಂದು ಹೇಳಿದರು.

"ರಾಜ್ಯವನ್ನು ಆಳುವ ಅವಕಾಶವನ್ನು ಪಡೆದ ಅವರು ಏನೂ ಮಾಡಲಿಲ್ಲ. ಅವರು ಹಣ ಸಂಪಾದಿಸಿದರು, ಜೈಲಿಗೆ ಹೋದರು (ಲಾಲು ಯಾದವ್ ಅವರನ್ನು ಉಲ್ಲೇಖಿಸಿ) ಮತ್ತು ಅವರ ಹೆಂಡತಿಯನ್ನು ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು (ರಾಬ್ರಿ ದೇವಿಯನ್ನು ಉಲ್ಲೇಖಿಸಿ)" ಎಂದು ನಿತೀಶ್ ಕುಮಾರ್ ಹೇಳಿದರು.

ಬಿಹಾರದ 243 ವಿಧಾನಸಭಾ ಸ್ಥಾನಗಳ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಅಕ್ಟೋಬರ್ 28ರಂದು 71 ಸ್ಥಾನಗಳು, ಎರಡನೇ ಹಂತದಲ್ಲಿ 94 ಸ್ಥಾನಗಳಿಗೆ ನವೆಂಬರ್ 3ರಂದು ಮತ್ತು ಉಳಿದ 78 ಸ್ಥಾನಗಳಿಗೆ ಮೂರನೇ ಹಂತದಲ್ಲಿ ನವೆಂಬರ್ 7ರಂದು ಚುನಾವಣೆ ನಡೆಯಲಿದೆ. ಫಲಿತಾಂಶಗಳು ನವೆಂಬರ್ 10ರಂದು ಪ್ರಕಟಗೊಳ್ಳಲಿವೆ.

ABOUT THE AUTHOR

...view details