ಕರ್ನಾಟಕ

karnataka

ETV Bharat / bharat

ಮೋದಿಗಿಂತ ಕೆಸಿಆರ್ ನಿಜವಾದ ಹಿಂದೂ: ಪ್ರಧಾನಿ ವಿರುದ್ಧ ಓವೈಸಿ ಚಾಟಿ - ಕೆಸಿಆರ್​

ಪ್ರಧಾನಿ ಮೋದಿಗಿಂತ ಸಿಎಂ ಕೆ. ಚಂದ್ರಶೇಖರ ರಾವ್​ ನಿಜವಾದ ಹಿಂದೂ ಎಂದು ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಅವರು ಭರ್ಜರಿ ಟಾಂಗ್​ ಕೊಟ್ಟಿದ್ದಾರೆ.

ಮೋದಿ ವಿರುದ್ಧ ಓವೈಸಿ ಆಕ್ರೋಶ

By

Published : Apr 6, 2019, 2:22 PM IST

Updated : Apr 6, 2019, 7:54 PM IST

ಹೈದರಾಬಾದ್​: ಪ್ರಧಾನಿ ಮೋದಿಗಿಂತ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್​ ಅವರು ನಿಜವಾದ ಹಿಂದೂ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ.

ನಲಗೊಂಡದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಕೆಸಿಆರ್​ಗೆ ಪ್ರಧಾನಿ ಮೋದಗಿಂತ ದೊಡ್ಡ ಹೃದಯವಿದೆ. ಮೋದಿಗಿಂತ ಕೆಸಿಆರ್​ ದೊಡ್ಡ ಹಿಂದೂ. ಇಬ್ಬರು ಹಿಂದುತ್ವದ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಿಂದುತ್ವ ಎಂಬುದು ಭಾರತದ ಜಾತೀಯತೆಯನ್ನು ತೊಡೆದುಹಾಕುವುದು. ಸಾಂಸ್ಕೃತಿಕ ಸಮ್ಮಿಲನ, ವಿಶ್ವ ಸಹೋದರತ್ವವನ್ನು ಹಿಂದುತ್ವ ಸಾರುತ್ತದೆ ಎಂದರು.

ಟಿಆರ್​ಎಸ್​ ಅಭ್ಯರ್ಥಿ ವೆಮಿರೆಡ್ಡಿ ನರಸಿಂಹ ರೆಡ್ಡಿ ಪರ ಅವರು ಮತಯಾಚನೆ ಮಾಡಿದರು. ಈ ವೇಳೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೆ ಗಡ್ಡ ತೆಗೆಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ಟಿಪಿಸಿಸಿಯ ಅಧ್ಯಕ್ಷ ಎನ್​ ಉತ್ತಮ್ ಕುಮಾರ್​ರ ಕಾಲೆಳೆದ ಅವರು, ಉತ್ತಮ ಗಡ್ಡ ಈಗಾಗಲೆ ನನ್ನ ಗಡ್ಡದಷ್ಟು ಬೆಳೆದಿದೆ. ಇನ್ನು 10 ವರ್ಷಗಳಾದ ಮೇಲೆ ಎಷ್ಟು ಉದ್ದ ಬೆಳೆಯುತ್ತೆ ಎಂದು ಕುಟುಕಿದರು.

Last Updated : Apr 6, 2019, 7:54 PM IST

ABOUT THE AUTHOR

...view details