ವಿಜಯವಾಡ(ಆಂಧ್ರಪ್ರದೇಶ):ಅಪಘಾತಕ್ಕೀಡಾಗಿದ್ದ ವ್ಯಕ್ತಿಯೋರ್ವನನ್ನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಹೋಗ್ತಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟಿದ್ದಾರೆ.
ಆಂಬ್ಯುಲೆನ್ಸ್ ನೋಡ್ತಿದ್ದಂತೆ ದಾರಿ ಬಿಟ್ಟ ಜಗನ್... ಬೆಂಗಾವಲು ವಾಹನ ನಿಲ್ಲಿಸಿದ ಆಂಧ್ರ ಸಿಎಂ!
ವಿಜಯವಾಡ ಏರ್ಪೋರ್ಟ್ನಿಂದ ಮನೆಗೆ ತೆರಳುತ್ತಿದ್ದ ವೇಳೆ ಅದೇ ರೋಡ್ನಲ್ಲಿ ಆಂಬ್ಯುಲೆನ್ಸ್ವೊಂದು ಬಂದಿದ್ದು, ತಕ್ಷಣವೇ ಆಂಧ್ರ ಸಿಎಂ ಅದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ವಿಜಯವಾಡ ವಿಮಾನ ನಿಲ್ದಾಣದಿಂದ ಸಿಎಂ ಜಗನ್ ವಾಪಸ್ ಆಗ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದ ವ್ಯಕ್ತಿಯನ್ನ ಹೊತ್ತು ಆಂಬ್ಯುಲೆನ್ಸ್ ಸಾಗುತ್ತಿತ್ತು. ಇದನ್ನ ನೋಡಿರುವ ಸಿಎಂ ತಕ್ಷಣವೇ ತನ್ನ ಬೆಂಗಾವಲು ವಾಹನಗಳನ್ನ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್ ದಾಟಿ ಹೋಗಿದೆ.
ಆಂಬ್ಯುಲೆನ್ಸ್ನಲ್ಲಿ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಖರ್ ಎಂಬ ವ್ಯಕ್ತಿ ಇದ್ದನು. ಇತನನ್ನ ವಿಜಯವಾಡದ ಇಎಸ್ಐ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಇದೇ ವೇಳೆ ಸಿಎಂ ಕೂಡ ಅದೇ ರೋಡ್ನಲ್ಲಿ ಪ್ರಯಾಣ ಬೆಳೆಸುತ್ತಿದ್ದರು.