ಕರ್ನಾಟಕ

karnataka

ETV Bharat / bharat

ಗತಕಾಲದ ವಿಶೇಷ ವಸ್ತುಗಳ ಸಂಗ್ರಹ 'ಅಮರ'.. ಇವರ ಬಳಿಯಿದೆ ವಿಶ್ವದ ಮೊದಲ ಕ್ಯಾಮೆರಾ..

ವಿಶ್ವದ ಅನೇಕ ಭಾಗಗಳಿಂದ ಅಪರೂಪದ ಕ್ಯಾಮೆರಾಗಳನ್ನು ಸಂಗ್ರಹಿಸಿದ್ದಾರೆ. ಈ ಕ್ಯಾಮೆರಾಗಳ ಸಂಗ್ರಹಣೆಗೆಂದು ದೇಶದ ನಾನಾ ರಾಜ್ಯಗಳಿಗೆ ಸ್ವಂತ ಖರ್ಚಿನಲ್ಲಿ ಭೇಟಿ ನೀಡಿದ್ದಾರೆ..

ANTIQUE CAMERA HOUSE
ಗತಕಾಲದ ವಿಶೇಷ ವಸ್ತಗಳ ಸಂಗ್ರಹಿಸುವ ಅಮರ್

By

Published : Sep 6, 2020, 6:04 AM IST

ಡೆಹ್ರಾಡೂನ್ :ಪ್ರತಿಯೊಬ್ಬರು ತಮ್ಮ ಅಭಿರುಚಿಗೆ ಅನುಗುಣವಾಗಿ ಹವ್ಯಾಸಗಳನ್ನು ಹೊಂದಿರುತ್ತಾರೆ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ಹಳೆಯ ವಸ್ತುಗಳನ್ನು ಸಂಗ್ರಹಿಸುವ ವಿಶಿಷ್ಟ ಹವ್ಯಾಸ ಹೊಂದಿದ್ದಾರೆ. ಕಸದಿಂದ ರಸ ಎಂಬಂತೆ ಇವುಗಳಿಂದಲೇ ತಮ್ಮ ಕೈತೋಟ ಅಲಂಕರಿಸಿದ್ದಾರೆ.

ಡೆಹ್ರಾಡೂನ್ ನಿವಾಸಿ ಅಮರ್ ಧುನಾಂದಾ ಅವರು ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದಾರೆ. ಅವರ ಸಂಗ್ರಹದಲ್ಲಿ ಮೊದಲ ಮಹಾಯುದ್ಧದಲ್ಲಿ ಹರಾಜಾದ ಟೇಬಲ್ ಇದೆ. ಅಮರ್ ಧುನಂದಾ ಹಳೆಯ ವಸ್ತುಗಳ ಸಂಗ್ರಹಣೆಗೆಂದು ವಿದೇಶಕ್ಕೆ ತೆರಳುತ್ತಾರೆ. ಅಲ್ಲಿಂದಲೂ ಅನೇಕ ಗತಕಾಲದ ವಿಶೇಷ ವಸ್ತುಗಳನ್ನು ತಂದು ಸಂಗ್ರಹಿಸಿದ್ದಾರೆ.

ಗತಕಾಲದ ವಿಶೇಷ ವಸ್ತಗಳ ಸಂಗ್ರಹಿಸುವ ಅಮರ್

ವಿಶ್ವದ ಅನೇಕ ಭಾಗಗಳಿಂದ ಅಪರೂಪದ ಕ್ಯಾಮೆರಾಗಳನ್ನು ಸಂಗ್ರಹಿಸಿದ್ದಾರೆ. ಈ ಕ್ಯಾಮೆರಾಗಳ ಸಂಗ್ರಹಣೆಗೆಂದು ದೇಶದ ನಾನಾ ರಾಜ್ಯಗಳಿಗೆ ಸ್ವಂತ ಖರ್ಚಿನಲ್ಲಿ ಭೇಟಿ ನೀಡಿದ್ದಾರೆ. ಇಂದು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿದ ಈ ಕ್ಯಾಮೆರಾಗಳ ಮೌಲ್ಯವು ಒಂದಾನೊಂದು ಕಾಲದಲ್ಲಿ ಲಕ್ಷಾಂತರ ರೂಪಾಯಿಯಾಗಿತ್ತಂತೆ. ಇವರ ಬಳಿ ವಿಶ್ವದ ಮೊದಲ ಕ್ಯಾಮೆರಾಗಳಲ್ಲಿ ಒಂದಾದ ಜಾರ್ಜ್​, 100 ವರ್ಷ ಹಳೆಯ ಮ್ಯಾಕ್ಸ್, ಝೀರೋ ಜಾ, ಮೆಸ್ಡ್, ಪಿನ್ಹೋಲ್ ಮತ್ತು ಎ ಕ್ಯಾಮೆರಾಗಳಿವೆ.

ಅಷ್ಟೇ ಅಲ್ಲ, ಅಮರ್ ಧುನಾಂದಾ ಅವರು ತಮ್ಮ ತೋಟದಲ್ಲಿ ಬಳಸಿದ ಅನುಪಯುಕ್ತ ಮತ್ತು ಹಳೆಯ ವಸ್ತುಗಳಿಗೆ ಹೊಸ ಸ್ಪರ್ಶ ನೀಡಲು ಪ್ರಯತ್ನಿಸುತ್ತಿದ್ದಾರೆ. ಅದು ಹಲ್ಲುಜ್ಜುವ ಬ್ರಷ್ ಆಗಿರಲಿ ಅಥವಾ ಹಾರ್ಪಿಕ್ ಬಾಟಲಿಯಾಗಿರಲಿ ಅಥವಾ ಹಾನಿಗೊಳಗಾದ ಚರ್ಮದ ಶೂ ಆಗಿರಲಿ.. ಅದನ್ನು ಸಂಗ್ರಹಿಸಿ ಅದಕ್ಕೆ ಹೊಸ ರೂಪ ನೀಡುತ್ತಾರೆ ಅಮರ್.

ಬಳಸಿ ಬಿಸಾಡುವ ವಸ್ತುಗಳನ್ನು ಸಂಗ್ರಹಿಸಿ ಅದಕ್ಕೆ ಹೊಸ ಮೆರುಗು ನೀಡುತ್ತಿರುವ ಅಮರ್ ಧುನಂದಾ ಅವರ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details