ಮುಂಬೈ:ನಟಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನ ಸಿಬಿಐ ತನಿಖೆಗೊಪ್ಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರ ಬಗ್ಗೆ ನಟಿ ಅಂಕಿತಾ ಲೋಖಂಡೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಸುಮಾರು ಏಳು ವರ್ಷಗಳಿಂದ ಸುಶಾಂತ್ ಅವರೊಂದಿಗೆ ಸಂಬಂಧ ಹೊಂದಿದ್ದ ಅಂಕಿತಾ "ನಾವು ಕಾಯುತ್ತಿದ್ದ ಕ್ಷಣ ಅಂತಿಮವಾಗಿ ಬಂದಿದೆ" ಎಂದು ಟ್ವೀಟ್ ಮಾಡಿದ್ದಾರೆ. ಶೀರ್ಷಿಕೆಯಲ್ಲಿ "ಕೃತಜ್ಞತೆ" ಎಂದು ಬರೆದುಕೊಂಡಿದ್ದಾರೆ.