ಕರ್ನಾಟಕ

karnataka

By

Published : Nov 23, 2020, 4:54 PM IST

ETV Bharat / bharat

ಚೊಂಬಿನೊಳಗೆ ತಲೆ ಸಿಕ್ಕಿಸಿಕೊಂಡು ಒಂದು ವಾರ ನರಳಿದ್ದ ಮಂಗ ರಕ್ಷಣೆ

ಚೊಂಬಿನೊಳಗೆ ತಲೆ ಸಿಕ್ಕಿಸಿ ಒಂದು ವಾರ ನರಳಿದ್ದ ಮಂಗವೊಂದನ್ನು ಪ್ರಾಣಿ ಪ್ರಿಯರು ರಕ್ಷಣೆ ಮಾಡಿದ್ದಾರೆ.

monkey rescued
ಉತ್ತರ ಪ್ರದೇಶದಲ್ಲಿ ಮಂಗನ ರಕ್ಷಣೆ

ಅಲಿಘಡ, ಉತ್ತರ ಪ್ರದೇಶ:ಸ್ಟೀಲ್ ಚೊಂಬಿನಳಗೆ ತಲೆಯನ್ನು ಸಿಕ್ಕಿಸಿಕೊಂಡು ಒಂದು ವಾರದವರೆಗೆ ನರಳಾಡುತ್ತಿದ್ದ ಮಂಗವೊಂದನ್ನು ಯುವಕರು ರಕ್ಷಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆಸಿದೆ.

ಅಲಿಘಡದ ಖೈರ್ ರಸ್ತೆಯಲ್ಲಿ ಮನೆಯೊಂದರಲ್ಲಿ ಮಂಗವೊಂದು ಚೊಂಬಿನಲ್ಲಿ ಸಿಲುಕಿದ್ದನ್ನು ಕಂಡ ಯುವ ಕ್ರಾಂತಿ ಮಂಚ್​​ನ ಸದಸ್ಯಯಾದ ಪೂಜಾ ಎಂಬಾಕೆ ತನ್ನ ಸ್ನೇಹಿತರ ಜೊತೆಗೂಡಿ ಮಂಗವನ್ನು ರಕ್ಷಿಸಲು ಮುಂದಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಂಗನ ರಕ್ಷಣೆ

ಈ ವೇಳೆ ಮಂಗದ ತಾಯಿ ಆಕೆಯ ಸ್ನೇಹಿತರ ಮೇಲೆ ದಾಳಿ ಮಾಡಿದ್ದು, ಗಜೇಂದ್ರ ಮತ್ತು ವಿಶಾಲ್ ಎಂಬುವವರಿಗೆ ಗಾಯವಾಗಿದೆ. ಆದರೂ ಛಲ ಬಿಡದ ಪ್ರಾಣಿಪ್ರಿಯರು ಆ ಮಂಗವನ್ನು ಕೊಠಡಿಯೊಳಗೆ ಎತ್ತೊಯ್ದು ಮಷಿನ್​ ಮೂಲಕ ಚೊಂಬನ್ನು ಕತ್ತರಿಸಿ, ಬಿಡುಗಡೆಗಳಿಸಿದ್ದಾರೆ.

ಒಂದು ವಾರದ ಕಾಲ ತಲೆ ಚೊಂಬಿನಲ್ಲಿದ್ದ ಕಾರಣದಿಂದ ಅಸ್ವಸ್ಥವಾಗಿದ್ದ ಮಂಗಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಿ, ತಾಯಿಯ ಬಳಿ ಬಿಡಲಾಗಿದೆ.

ABOUT THE AUTHOR

...view details