ಕರ್ನಾಟಕ

karnataka

ETV Bharat / bharat

ಜೀವಕ್ಕೆ ಕುತ್ತು ತಂದ ಸೆಲ್ಫಿ ಗೀಳು: ನದಿಯಲ್ಲಿ ಕಾಲು ಜಾರಿಬಿದ್ದು ತಾಯಿ-ಮಗ ನೀರುಪಾಲು - ಚಿತ್ತೂರಿನಲ್ಲಿ ನೀರಿಗೆ ಬಿದ್ದ ತಾಯಿ ಮತ್ತು ಮಗ

ನದಿ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ತಾಯಿ ಮತ್ತು ಮಗ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ, ತಾಯಿಯ ಮೃತದೇಹ ಮತ್ತೆಯಾಗಿದ್ದು, ಬಾಲಕನಿಗಾಗಿ ಶೋಧಕಾರ್ಯ ಮುಂದುವರೆದಿದೆ.

Mother, son drown while taking selfie
ತಾಯಿ-ಮಗ ನೀರುಪಾಲು

By

Published : Oct 25, 2020, 6:52 AM IST

ಚಿತ್ತೂರು(ಆಂಧ್ರಪ್ರದೇಶದ):ನದಿ ಬಳಿ ಸೆಲ್ಫಿ ತೆಗೆದುಕೊಳ್ಳಲು ತೆರಳಿದ ತಾಯಿ ಮತ್ತು ಮಗ ನೀರಿನಲ್ಲಿ ಕೊಚ್ಚಿ ಹೋಗಿದ್ದು, ತಾಯಿಯ ಮೃತದೇಹ ಪತ್ತೆಯಾಗಿದೆ.

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜಲ್ಲಿಪೆಟ್ಟಾ ಪ್ರದೇಶದ ಕೌಂಡಿನ್ಯಾ ಚೆಕ್ ಡ್ಯಾಮ್ ಬಳಿ ಈ ಘಟನೆ ನಡೆದಿದೆ. ತಾಯಿ ಮತ್ತು ಮಗ ನದಿಯ ಪಕ್ಕದಲ್ಲೇ ಇರುವ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕಾಲು ಜಾರಿ ಇಬ್ಬರು ನೀರಿಗೆ ಬಿದ್ದಿದ್ದಾರೆ.

ನದಿ ಬಳಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದ ತಾಯಿ-ಮಗ ನೀರುಪಾಲು

ತಾಯಿ ಮತ್ತು ಮಗ ಪಾಲಮನೇರು ಗದ್ದೂರ್ ಕಾಲೋನಿಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಸ್ಥಳೀಯರು ಮಹಿಳೆ ಮೃತದೇಹವನ್ನು ಪತ್ತೆ ಹಚ್ಚಿದ್ದು, ಬಾಲಕ ಕಾಣೆಯಾಗಿದ್ದಾನೆ. ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ABOUT THE AUTHOR

...view details