ಕೊಚ್ಚಿ(ಕೇರಳ) :ತನ್ನ ಬೆಕ್ಕುಗಳಿಗೆ ಹೊರಗಿನಿಂದ ಆಹಾರ ತರಲು ಪೊಲೀಸರಿಗೆ ಮನವಿ ಮಾಡಿ ಅನುಮತಿ ನಿರಾಕರಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬ ಕೇರಳ ಹೈಕೋರ್ಟ್ ಮೊರೆ ಹೋಗಿದ್ದ. ಈಗ ಆ ಆತನ ಮನವಿಯನ್ನ ಹೈಕೋರ್ಟ್ ಪುರಸ್ಕರಿಸಿದೆ.
ಲಾಕ್ಡೌನ್ ವೇಳೆ ಬೆಕ್ಕುಗಳ ನೆರವಿಗೆ ಬಂದ ಕೇರಳ ಹೈಕೋರ್ಟ್..
ಆನ್ಲೈನ್ ಮೂಲಕ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಪ್ರಕಾಶ್ಗೆ ಆಹಾರ ತೆಗೆದುಕೊಂಡು ಬರಲು ಮನೆಯಿಂದ ಹೊರಗಡೆ ತೆರಳಲು ಅನುಮತಿ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಯಲ್ಲಿರುವ ಮೂರು ಬೆಕ್ಕುಗಳಿಗೆ ಆಹಾರ ತರಲು ಮನೆಯಿಂದ ಹೊರಗೆ ತೆರಳಲು ಅನುಮತಿ ನೀಡಬೇಕೆಂದು ಕೊಚ್ಚಿ ಮೂಲದ ಎನ್ ಪ್ರಕಾಶ್ ಎಂಬಾತ ಪೊಲೀಸರಲ್ಲಿ ಮನವಿ ಮಾಡಿದ್ದ. ಆದರೆ, ಪೊಲೀಸರು ಆತನ ಮನವಿ ತಿರಸ್ಕರಿಸಿದ್ದರು. ಇದರಿಂದ ಬೇಸತ್ತ ಪ್ರಕಾಶ್ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಲಾಕ್ಡೌನ್ ವೇಳೆ ಮನೆಯಿಂದ ಹೊರಗಡೆ ತೆರಳಿ ಬೆಕ್ಕಿಗೆ ಆಹಾರ ತರಲು ಅನುಮತಿ ಕೊಡಿಸಬೇಕೆಂದು ಮನವಿ ಮಾಡಿದ್ದ.
ತಾನು ಸಸ್ಯಾಹಾರಿಯಾದ ಕಾರಣ ಮನೆಯಲ್ಲಿ ಬೆಕ್ಕಿಗೆ ಆಹಾರ ತಯಾರಿಸಲು ಸಾಧ್ಯವಾಗ್ತಿಲ್ಲ ಎಂದೂ ಉಲ್ಲೇಖಿಸಿದ್ದ. ಜೊತೆಗೆ ಬೆಕ್ಕುಗಳ ಫೋಟೋ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ ಬೀದಿ ನಾಯಿಗಳಿಗೆ ಆಹಾರ ನೀಡುವಂತೆ ಹೇಳಿಕೆ ನೀಡಿದ್ದ ವರದಿಯನ್ನೂ ಲಗತ್ತಿಸಿದ್ದ. ಆನ್ಲೈನ್ ಮೂಲಕ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಪ್ರಕಾಶ್ಗೆ ಆಹಾರ ತೆಗೆದುಕೊಂಡು ಬರಲು ಮನೆಯಿಂದ ಹೊರಗಡೆ ತೆರಳಲು ಅನುಮತಿ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.