ಕರ್ನಾಟಕ

karnataka

By

Published : Jul 18, 2019, 5:39 PM IST

ETV Bharat / bharat

ಕೈ ಪಕ್ಷಕ್ಕೆ ಗುಡ್​ ಬೈ ಹೇಳಿದ್ದ ಅಲ್ಪೇಶ್​ ಠಾಕೂರ್​ ಬಿಜೆಪಿ ಸೇರ್ಪಡೆ

ಕಾಂಗ್ರೆಸ್​ ಪಕ್ಷಕ್ಕೆ ಗುಡ್​ ಬೈ ಹೇಳಿದ್ದ ಗುಜರಾತ್​ನ ಶಾಸಕ ಅಲ್ಪೇಶ್​ ಠಾಕೂರ್​ ಮತ್ತು ಧವಳ್ ಸಿಂಗ್ ಕಮಲ ಮುಡಿದಿದ್ದಾರೆ.

ಅಲ್ಪೇಶ್​ ಠಾಕೂರ್​ ಬಿಜೆಪಿ ಸೇರ್ಪಡೆ

ಅಹಮದಾಬಾದ್(ಗುಜರಾತ್​):ಲೋಕಸಭಾ ಚುನಾವಣೆಗೂ ಒಂದು ದಿನ ಮುಂಚಿತವಾಗಿ ಕಾಂಗ್ರೆಸ್​ ಪಕ್ಷಕ್ಕೆ ಗುಡ್​ ಬೈ ಹೇಳಿದ್ದ ಶಾಸಕ ಅಲ್ಪೇಶ್​ ಠಾಕೂರ್​ ಮತ್ತು ದವಲ್​ಸಿಂಗ್ ಜಲಾ ಕೊನೆಗೂ ಬಿಜೆಪಿ ಸೇರಿದ್ದಾರೆ.

ಗುಜರಾತ್​ ಬಿಜೆಪಿ ರಾಜ್ಯಾಧ್ಯಕ್ಷ ಜಿತು ವಘಾನಿ ನೇತೃತ್ವದಲ್ಲಿ ಕಮಲ ಪಾಳಯ ಸೇರಿಕೊಂಡಿದ್ದಾರೆ ಈ ಇಬ್ಬರು ಮುಖಂಡರು. ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ ಅವರು 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಗುಜರಾತ್​ನಲ್ಲಿ ಹಾರ್ದಿಕ್​ ಪಟೇಲ್​, ಜಿಗ್ನೇಶ್​ ಮೇವಾನಿ ಜತೆ ಸೇರಿ ಅಲ್ಪೇಶ್​ ಠಾಕೂರ್​ ಕೂಡ ಬಿಜೆಪಿ ವಿರುದ್ಧ ಪ್ರಬಲ ಹೋರಾಟ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲ ಮುಡಿದಿದ್ದಾರೆ.

ಗುಜರಾತ್ ಕಾಂಗ್ರೆಸ್ ಘಟಕದಲ್ಲಿನ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದ ಅಲ್ಪೇಶ್, ಪಕ್ಷದಲ್ಲಿ ಯುವ ಮುಖಂಡರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

For All Latest Updates

TAGGED:

ABOUT THE AUTHOR

...view details