ಕರ್ನಾಟಕ

karnataka

ETV Bharat / bharat

ಮರ್ಯಾದಾ ಹತ್ಯೆ ಆರೋಪ: ಯುವತಿಯ ತಂದೆ, ಚಿಕ್ಕಪ್ಪ ಪೊಲೀಸ್ ವಶಕ್ಕೆ

ಇಚ್ಛೆಗೆ ವಿರುದ್ಧವಾಗಿ ತಮ್ಮ ಪುತ್ರಿಯನ್ನು ವಿವಾಹವಾಗಿದ್ದ ಯುವಕನ್ನು ಹತ್ಯೆಮಾಡಿದ ಆರೋಪದ ಮೇಲೆ ಯುವತಿಯ ತಂದೆ ಮತ್ತು ಅವರ ಚಿಕ್ಕಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Man allegedly hacked to death in honour killing
ಮರ್ಯಾದಾ ಹತ್ಯೆ ಆರೋಪ

By

Published : Dec 26, 2020, 4:29 PM IST

ಪಾಲಕ್ಕಾಡ್ (ಕೇರಳ): ಮೂರು ತಿಂಗಳ ಹಿಂದೆ ವಿವಾಹವಾಗಿದ್ದ 29 ವರ್ಷದ ಯುವಕ ಅನೀಶ್ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಪತ್ನಿಯ ಸಂಬಂಧಿಕರು ಯುವಕನನ್ನು ಕೊಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಅನೀಶ್ ಯುವತಿಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದ ಎನ್ನಲಾಗಿದೆ. ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಯುವತಿಯ ತಂದೆ ಪ್ರಭುಕುಮಾರ್ ಮತ್ತು ಅವರ ಚಿಕ್ಕಪ್ಪ ಸುರೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಅನೀಶ್ ಮತ್ತು ಯುವತಿ ಎರಡು ವಿಭಿನ್ನ ಜಾತಿಗೆ ಸೇರಿದವರಾಗಿದ್ದಾರೆ ಮತ್ತು ಹುಡುಗಿಯ ಕುಟುಂಬಕ್ಕೆ ಹೋಲಿಸಿದರೆ ಅನೀಶ್ ಅವರ ಕುಟುಂಬ ಆರ್ಥಿಕವಾಗಿ ದುರ್ಬಲವಾಗಿದೆ. ಇದು ಹುಡುಗಿಯ ಕುಟುಂಬವನ್ನು ಕೆರಳಿಸಿತ್ತು ಮತ್ತು ಅವರು ಮದುವೆಯನ್ನು ಒಪ್ಪಿರಲಿಲ್ಲ ಎನ್ನಲಾಗಿದೆ.

ಸಂಚುರೂಪಿಸಿ ಅನೀಶ್​ನನ್ನು ಹತ್ಯೆ ಮಾಡಲಾಗಿದೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದು, ಅವರ ಹಿರಿಯ ಸಹೋದರ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ. ವಾಹನದಲ್ಲಿ ಬಂದು, ಕತ್ತಿಯಿಂದ ಹೊಡೆದು ಅನೀಶ್​ನನ್ನು ಕೊಲೆ ಮಾಡಿದ್ದಾರೆ ಎಂದು ಘಟನೆ ನೋಡಿದ ಅವರ ಸಹೋದರ ಹೇಳಿದ್ದಾರೆ.

ಅನೀಶ್ ಮತ್ತು ಹುಡುಗಿ ಬೇರೆ ಜಾತಿಗಳಿಗೆ ಸೇರಿದವರಾಗಿದ್ದರಿಂದ, ಹುಡುಗಿಯ ಕುಟುಂಬವು ಈ ಸಂಬಂಧವನ್ನು ತೀವ್ರವಾಗಿ ಆಕ್ಷೇಪಿಸಿತ್ತು. ಅನೀಶ್ ಅವರ ಆರ್ಥಿಕ ಸ್ಥಿತಿ ಕೂಡ ಅವರ ವಿರೋಧಕ್ಕೆ ಕಾರಣವಾಗಿತ್ತು. ಹುಡುಗಿಯನ್ನು ಅನೀಶ್​ನೊಂದಿಗೆ ಹೆಚ್ಚು ಕಾಲ ಬದುಕಲು ಬಿಡುವುದಿಲ್ಲ ಎಂದು ಹುಡುಗಿಯ ಮನೆಯವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ABOUT THE AUTHOR

...view details