ಕರ್ನಾಟಕ

karnataka

ETV Bharat / bharat

ನಾಳೆ ಸಂಭವಿಸಲಿದೆ 'ರಿಂಗ್ ಆಫ್ ಫೈರ್' ಸೂರ್ಯ ಗ್ರಹಣ - ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

ರಾಜಸ್ಥಾನದ ಸೂರತ್​ಗರ್ ಮತ್ತು ಅನುಪ್‌ಗರ್, ಹರಿಯಾಣದ ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ, ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ ಮತ್ತು ಜೋಶಿಮಠದಲ್ಲಿ ಕೇವಲ ಒಂದು ನಿಮಿಷದವರೆಗೆ ಸೂರ್ಯ 'ಬೆಂಕಿಯ ಉಂಗುರದಂತೆ' ಕಾಣಿಸಲಿದೆ.

eclipse
eclipse

By

Published : Jun 20, 2020, 1:05 PM IST

ನವದೆಹಲಿ: ಭಾರತದ ಉತ್ತರ ಭಾಗಗಳಲ್ಲಿ ನಾಳೆ ಬೆಳಗ್ಗೆ 10:25ರಿಂದ ಸೂರ್ಯಗ್ರಹಣ ಗೋಚರಿಸಲಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿ ಆರ್ಯಭಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸ್ ಯುಟ್ಯೂಬ್, ಫೇಸ್​ಬುಕ್ ಮತ್ತು ಜೂಮ್ ಮೂಲಕ ಸೂರ್ಯಗ್ರಹಣವನ್ನು ನೇರ ಪ್ರಸಾರ ಮಾಡಲಿದೆ.

ನಾಳೆ ಸಂಭವಿಸಲಿರುವ ಸೂರ್ಯ ಗ್ರಹಣದಲ್ಲಿ ಸೂರ್ಯ ಬೆಂಕಿಯ ಉಂಗುರದಂತೆ ಗೋಚರಿಸಲಿದೆ. ಚಂದ್ರನು ಸೂರ್ಯನನ್ನು ಉಂಗುರ ರೂಪಿಸುವ ರೀತಿಯಲ್ಲಿ ಆವರಿಸುತ್ತದೆ.

ರಾಜಸ್ಥಾನದ ಸೂರತ್​ಗರ್ ಮತ್ತು ಅನುಪ್‌ಗರ್, ಹರಿಯಾಣದ ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ, ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ ಮತ್ತು ಜೋಶಿಮಠದಲ್ಲಿ ಕೇವಲ ಒಂದು ನಿಮಿಷದವರೆಗೆ ಸೂರ್ಯ 'ಬೆಂಕಿಯ ಉಂಗುರದಂತೆ' ಕಾಣಿಸಲಿದೆ. ಈ ಸೂರ್ಯಗ್ರಹಣವು ಆಫ್ರಿಕಾ, ಏಷ್ಯಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ.

ಬೆಳಿಗ್ಗೆ 10:25ಕ್ಕೆ ಆರಂಭಗೊಳ್ಳುವ ಗ್ರಹಣ ಮಧ್ಯಾಹ್ನ 1:54ಕ್ಕೆ ಕೊನೆಗೊಳ್ಳಲಿದೆ.

ಸೂರ್ಯಗ್ರಹಣದ ಸಂದರ್ಭದಲ್ಲಿ ಹೀಗೆ ಮಾಡಿ

  • ಗ್ರಹಣವನ್ನು ವೀಕ್ಷಿಸಲು ಮತ್ತು ಕಣ್ಣುಗಳಿಗೆ ಹಾನಿ ತಪ್ಪಿಸಲು ಸರಿಯಾದ ಫಿಲ್ಟರ್‌ಗಳನ್ನು ಹೊಂದಿರುವ ಎಕ್ಲಿಪ್ಸ್ ಗ್ಲಾಸ್ (ಐಎಸ್‌ಒ ಸರ್ಟಿಫೈಡ್) ಅಥವಾ ಕ್ಯಾಮೆರಾ ಬಳಸಿ.
  • ಪಿನ್‌ಹೋಲ್ ಕ್ಯಾಮೆರಾವನ್ನು ಬಳಸಿಕೊಂಡು ಪರದೆಯ ಮೇಲೆ ಬೀಳುವ ಪ್ರೊಜೆಕ್ಷನ್ ವೀಕ್ಷಿಸುವುದು ಸುರಕ್ಷಿತ ಮಾರ್ಗವಾಗಿದೆ.

ಸೂರ್ಯಗ್ರಹಣದ ಸಂದರ್ಭದಲ್ಲಿ ಹೀಗೆ ಮಾಡಬೇಡಿ

  • ಬರಿಗಣ್ಣಿನಿಂದ ಸೂರ್ಯನನ್ನು ನೇರವಾಗಿ ನೋಡಬೇಡಿ.
  • ಎಕ್ಸರೆ ಫಿಲ್ಮ್‌ ಹಾಗೂ ಸಾಮಾನ್ಯ ಸನ್​ಗ್ಲಾಸ್​ ಮೂಲಕ ಗ್ರಹಣ ವೀಕ್ಷಿಸಬೇಡಿ.
  • ಗ್ರಹಣವನ್ನು ನೋಡಲು ಪೈಂಟ್ ಬಳಿದಿರುವ ಗಾಜು ಬಳಸಬೇಡಿ.

ABOUT THE AUTHOR

...view details