ಕರ್ನಾಟಕ

karnataka

ETV Bharat / bharat

ಬಿಜೆಪಿ ಎಲ್ಲ MP, MLAಗಳ ತಿಂಗಳ ಸ್ಯಾಲರಿ ದೇಣಿಗೆ: ಸಂಸದರಿಂದ ಕೋಟಿ ರೂ ಹೆಚ್ಚುವರಿ ಅನುದಾನ

ಡೆಡ್ಲಿ ವೈರಸ್​ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಹೊರಬರಲು ಭಾರತ ಹರಸಾಹಸ ಪಡುತ್ತಿದೆ.

JP Nadda
JP Nadda

By

Published : Mar 28, 2020, 5:56 PM IST

ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಭಾರತ ಈಗಾಗಲೇ ಅನೇಕ ಮೂಲಗಳಿಂದ ದೇಣಿಗೆ ಪಡೆದುಕೊಳ್ಳುತ್ತಿದ್ದು, ಸಿನಿಮಾ ಸ್ಟಾರ್​,ಕ್ರಿಕೆಟರ್ಸ್​, ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಈಗಾಗಲೇ ತಮ್ಮ ಕೈಯಿಂದ ಆದಷ್ಟು ಹಣ ಪ್ರಧಾನಿ ಪರಿಹಾರ ನಿಧಿ ಹಾಗೂ ಸಿಎಂ ಪರಿಹಾರ ನಿಧಿಗೆ ನೀಡುತ್ತಿದ್ದಾರೆ.

ಇದೀಗ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿರುವ ಪ್ರಕಾರ ರಾಷ್ಟ್ರದಲ್ಲಿರುವ ಬಿಜೆಪಿ ಎಲ್ಲ ಸಂಸದರು ತಮ್ಮ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅನುದಾನದಲ್ಲಿನ 1 ಕೋಟಿ ರೂಪಾಯಿ ಹಾಗೂ ತಿಂಗಳ ಸಂಬಳ ನೀಡುವಂತೆ ನಿರ್ಧರಿಸಿದ್ದು, ಇದರ ಜತೆಗೆ ಎಲ್ಲ ಬಿಜೆಪಿ ಶಾಸಕರು ತಮ್ಮ ಒಂದು ತಿಂಗಳ ಸ್ಯಾಲರಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸಲು ಈ ಫಂಡ್​ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details