ನವದೆಹಲಿ:ನೆಟ್ಫ್ಲಿಕ್ಸ್ನ ಪ್ರಖ್ಯಾತ ವೆಬ್ ಸರಣಿ ಸೇಕ್ರೆಡ್ ಗೇಮ್ಸ್ನ ಎರಡನೇ ಸೀಸನ್ನಲ್ಲಿರುವ ಕೆಲವು ದೃಶ್ಯಗಳು ಸಿಖ್ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅಕಾಲಿ ದಳ ಆರೋಪಿಸಿದೆ.
ಸೇಕ್ರೆಡ್ ಗೇಮ್ಸ್ ವಿರುದ್ಧ ತಿರುಗಿಬಿದ್ದ ಅಕಾಲಿ ದಳ: ಈ ಸೀನ್ ಕತ್ತರಿಸಲು ಆಗ್ರಹ
ನೆಟ್ಫ್ಲಿಕ್ಸ್ನ ಪ್ರಖ್ಯಾತ ವೆಬ್ ಸರಣಿ ಸೇಕ್ರೆಡ್ ಗೇಮ್ಸ್ನ ಎರಡನೇ ಸೀಸನ್ನಲ್ಲಿರುವ ಕೆಲವು ದೃಶ್ಯಗಳು ಸಿಖ್ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅಕಾಲಿ ದಳ ಆರೋಪಿಸಿದೆ.
akalidal angry over sacred games scene
ಈ ಕುರಿತು ಟ್ವೀಟ್ ಮಾಡಿರುವ ಅಕಾಲಿದಳದ ಶಾಸಕ ಮಣಿಜಿಂದರ್ ಸಿಂಗ್ ಸಿರ್ಸಾ ಅವರು ಸೇಕ್ರೆಡ್ ಗೇಮ್ಸ್ ಎರಡನೇ ಸರಣಿಯ ದೃಶ್ಯವೊಂದರಲ್ಲಿ ಸೈಫ್ ಆಲಿ ಖಾನ್ ಅವರು ಕೈಯ್ಯಲ್ಲಿ ತೊಟ್ಟಿರುವ ಕಡವನ್ನು (ಕಡಗ) ಸಮುದ್ರಕ್ಕೆ ಎಸೆಯುತ್ತಾರೆ.
ಸಿಖ್ ಸಮುದಾಯದವರು ಕಡವನ್ನು ಪವಿತ್ರವಾಗಿ ಕಾಣುತ್ತಾರೆ. ಅದು ಸಿಖ್ಖರ ಹೆಮ್ಮೆ, ಗುರು ಸಾಹೀಬರ ಆಶೀರ್ವಾದ. ಅನುರಾಗ್ ಕಶ್ಯಪ್ ಅವರು ಬೇಕೆಂದೇ ಈ ಸೀನ್ ಅನ್ನು ಸೇರಿಸಿದ್ದಾರೆ ಎಂದು ಸಿರ್ಸಾ ಅವರು ಆರೋಪಿಸಿದ್ದಾರೆ.