ಕರ್ನಾಟಕ

karnataka

ETV Bharat / bharat

ಮೇ 25ರಿಂದ ದೇಶಿ ವಿಮಾನ ಹಾರಾಟ : ಪ್ರಯಾಣಿಕರ ಮಾರ್ಗಸೂಚಿ ಇಲ್ಲಿದೆ - ಲಾಕ್​ಡೌನ್

ಮೇ 25ರಿಂದ ಪುನಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದ ಬಳಿಕ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ವಿಮಾನ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳ ಬಗೆಗಿನ ಮಾರ್ಗಸೂಚಿಯನ್ನು ಪ್ರಕಟಿಸಿದೆ.

air travel
ವಿಮಾನ

By

Published : May 21, 2020, 4:38 PM IST

Updated : May 21, 2020, 4:59 PM IST

ನವದೆಹಲಿ:ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ವಿಮಾನಗಳ ಹಾರಾಟ ಕಾರ್ಯಾಚರಣೆಯು ಮೇ 25ರಿಂದ ಪುನರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಇದರ ಬೆನ್ನಲ್ಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ವಿಮಾನ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳ ಬಗೆಗಿನ ಮಾರ್ಗಸೂಚಿಯನ್ನು ಪ್ರಕಟಿಸಿದೆ.

  • ಪ್ರಯಾಣಿಕರು ವಿಮಾಣ ನಿಲ್ದಾಣ ಟರ್ಮಿನಲ್​ ಕಟ್ಟಡಕ್ಕೆ ಪ್ರವೇಶ ಮುನ್ನ ಥರ್ಮಲ್​ ಸ್ಕ್ರೀನಿಂಗ್​ ವಲಯದಲ್ಲಿ ಕಡ್ಡಾಯವಾಗಿ ಬರಬೇಕು
  • ಎಲ್ಲ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ ಹೊಂದಿರುವುದು ಕಡ್ಡಾಯ 14 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಅನ್ವಯಿಸಲ್ಲ)
  • ವಿಮಾನ ಹೊರಡುವ 2 ಗಂಟೆಗೂ ಮುನ್ನ ವಿಮಾನ ನಿಲ್ದಾಣ ತಲುಪಿರಬೇಕು
  • ವಿಮಾನ ಹೊರಡುವ ಸಮಯ 4 ಗಂಟೆಗಿಂತಲೂ ಕಡಿಮೆ ಇದ್ದರೆ ಮಾತ್ರ ಪ್ರಯಾಣಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ವಲಯದೊಳಗೆ ಪ್ರವೇಶ
  • ಮುಖಗವಸು ಮತ್ತು ಕೈಗವಸು ಧರಿಸುವುದು ಕಡ್ಡಾಯ
  • ಎಲ್ಲರೂ ಥರ್ಮಲ್‌ ಸ್ಕ್ರೀ‌ನ್‌ ಮೂಲಕ ತಪಾಸಣೆಗೆ ಒಳಗಾಗಬೇಕು
  • ವಿಶೇಷ ಪರಿಸ್ಥಿತಿಗಳು ಹೊರತು ಪಡಿಸಿ, ಟ್ರಾಲಿಗಳ ಬಳಕೆಗೆ ಅವಕಾಶವಿಲ್ಲ
  • ವಿಮಾನ ನಿಲ್ದಾಣಗಳಿಗೆ ತಲುಪಲು ಪ್ರಯಾಣಿಕರು ಮತ್ತು ವಿಮಾನಯಾನ ಸಿಬ್ಬಂದಿಗೆ ರಾಜ್ಯ ಸರ್ಕಾರಗಳು ಹಾಗೂ ಆಡಳಿತ ಸಾರ್ವಜನಿಕ ಸಾರಿಗೆ, ಖಾಸಗಿ ಟ್ಯಾಕ್ಸಿಗಳ ವ್ಯವಸ್ಥೆ ಕಲ್ಪಿಸಬೇಕು
  • ಖಾಸಗಿ ವಾಹನಗಳು ಅಥವಾ ಆಯ್ಕೆ ಮಾಡಿದ ಕ್ಯಾಬ್‌ ಸೇವೆಗಳ ಮೂಲಕ ಮಾತ್ರವೇ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗಲು ಅವಕಾಶ
  • ಕನಿಷ್ಠ ಒಂದು ಮೀಟರ್ ಅಂತರದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
  • ಹಾರಾಟದುದ್ದಕ್ಕೂ ಪ್ರಯಾಣಿಕರು ನೈರ್ಮಲ್ಯ ನಿಯಮಗಳನ್ನು ಪಾಲನೆ ಮಾಡಬೇಕು
  • ಪ್ರಯಾಣಿಕರು ಮುಖಾಮುಖಿ ಸಂವಹನ ಕಡಿಮೆಗೊಳಿಸಬೇಕು
  • ಪ್ರಯಾಣಿಕರಿಗೆ ಶೌಚಾಲಯದ ಬಳಕೆ ಕಡಿಮೆ ಮತ್ತು ಅನಾವಶ್ಯಕ ಓಡಾಟಕ್ಕೆ ನಿರ್ಬಂಧ
  • ಶೌಚಾಲಯದಲ್ಲಿ ಕ್ಯೂಯಿಂಗ್ ಇಲ್ಲ. ಮಕ್ಕಳು ಮತ್ತು ವೃದ್ಧರಿಗೆ ಅವಕಾಶವಿಲ್ಲ
  • ವಿಮಾನದಲ್ಲಿ ಯಾವುದೇ ಊಟದ ಸೇವೆಗಳ ಲಭ್ಯವಿರುವುದಿಲ್ಲ
  • ಗ್ಯಾಲರಿ ಪ್ರದೇಶದಲ್ಲಿ ಅಥವಾ ಆಸನಗಳಲ್ಲಿ ನೀರಿನ ಬಾಟಲಿಯನ್ನು ಲಭ್ಯವಿರಬೇಕು
  • ಹಾರಾಟದ ಸಮಯದಲ್ಲಿ ಪ್ರಯಾಣಿಕರು ವಿಮಾನದೊಳಗೆ ಯಾವುದೇ ತಿನ್ನಬಹುದಾದ ವಸ್ತುಗಳನ್ನು ಸೇವಿಸುವಂತಿಲ್ಲ
Last Updated : May 21, 2020, 4:59 PM IST

ABOUT THE AUTHOR

...view details