ನವದೆಹಲಿ:ಉಸಿರಾಡೋ ಗಾಳಿ ರಾಷ್ಟ್ರ ರಾಜಧಾನಿಯಲ್ಲಿ ವಿಷವಾಗಿ ಪರಿಣಮಿಸುತ್ತಿದೆ. ದಿನದಿಂದ ದಿನಕ್ಕೆ ದೆಹಲಿಯ ಗಾಳಿ ಗುಣಮಟ್ಟ ಕ್ಷೀಣಿಸುತ್ತಿದ್ದು ಇಲ್ಲಿನ ನಾಗರಿಕರು ಅಪಾಯವನ್ನು ಎದುರಿಸುತ್ತಿದ್ದಾರೆ.
ರಾಜಧಾನಿಯ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಮೂಗಿಗೆ ಕರವಸ್ತ್ರ ಮುಚ್ಚಿಕೊಂಡು ಸಂಚರಿಸಿದ್ರು. ಇಂದು ಮುಂಜಾನೆ ವಾಯು ಗುಣಮಟ್ಟ ಸೂಚ್ಯಂಕ(Air Quality Index) 62 5ಕ್ಕೇರಿಕೆಯಾಗಿದ್ದು, ಈ ಬಾರಿಯ ಅತಿ ಕ್ಷೀಣ ಗುಣಮಟ್ಟ ಇದಾಗಿದೆ. ಸದ್ಯದ ಮಾಹಿತಿ ಪ್ರಕಾರ ಎಐಕ್ಯೂ 1000 ಹತ್ತಿರ ಸಮೀಪವಿದೆ ಎನ್ನಲಾಗಿದೆ.
ವಾಯು ಗುಣಮಟ್ಟ ಸೂಚ್ಯಂಕವು, 0-50 ನಡುವಿದ್ದರೆ 'ಉತ್ತಮ', 51-100 "ತೃಪ್ತಿದಾಯಕ", 101-200 "ಮಧ್ಯಮ", 201-300 "ಕಳಪೆ", 301-400 "ತುಂಬಾ ಕಳಪೆ" ಮತ್ತು 401-500 "ತೀವ್ರ ಕಳಪೆ" ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ 500 ಕ್ಕಿಂತ ಹೆಚ್ಚಿದ್ದರೆ 'ತೀವ್ರ ಹಾಗೂ ಅತಿ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ದೆಹಲಿ ಈಗ ಇದೆಲ್ಲವನ್ನೂ ಮೀರಿ, 1000 ಸಮೀಪಿಸಿದೆ.
ಅಪಾಯದ ಹಂತ ತಲುಪುತ್ತಿದ ದೆಹಲಿ!
ಅತ್ಯಂತ ಕಳಪೆ ಮತ್ತು ಅಪಾಯಕಾರಿ ಗುಣಮಟ್ಟದ ಈ ವಾಯುವಿನಿಂದ ರಾಜಧಾನಿಯ ನಾಗರಿಕರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.