ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಬಾಲಕೋಟ್ನಲ್ಲಿ ನಡೆಸಿರುವ ಏರ್ಸರ್ಜಿಕಲ್ ಸ್ಟ್ರೈಕ್ನಲ್ಲಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇಲ್ಲಿಯವರೆಗೆ ಖಚಿತ ಮಾಹಿತಿ ಮಾತ್ರ ಲಭ್ಯವಾಗಿಲ್ಲ.
ಪಾಕ್ ಸೇನೆ ಉಗ್ರರ ಶವ ಹೊತ್ತೊಯ್ದಿದ್ದು ನಿಜ... ಏರ್ಸ್ಟ್ರೈಕ್ನಲ್ಲಿ ಸತ್ತ ಉಗ್ರರ ಸಂಖ್ಯೆ ಬಿಚ್ಚಿಟ್ಟ ಇಟಲಿ ಪತ್ರಕರ್ತ!
ಇದೀಗ ಭಾರತೀಯ ವಾಯುಪಡೆ ನಡೆಸಿರುವ ಬಾಂಬ್ ದಾಳಿಯಲ್ಲಿ ಉಗ್ರರು ಸಾವನ್ನಪ್ಪಿರುವುದು ಕನ್ಫರ್ಮ್ ಎಂಬ ಹೇಳಿಕೆ ನೀಡಿದ್ದಾರೆ. ಏರ್ಸ್ಟ್ರೈಕ್ ನಡೆದ ಮರುದಿನವೇ ಅವರು ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿ ಹೊರಹಾಕಿದ್ದಾರೆ.
ಇದೀಗ ಭಾರತೀಯ ವಾಯುಪಡೆ ನಡೆಸಿರುವ ಬಾಂಬ್ ದಾಳಿಯಲ್ಲಿ ಉಗ್ರರು ಸಾವನ್ನಪ್ಪಿರುವುದು ಕನ್ಫರ್ಮ್ ಎಂಬ ಹೇಳಿಕೆ ನೀಡಿದ್ದಾರೆ. ಏರ್ಸ್ಟ್ರೈಕ್ ನಡೆದ ಮರುದಿನವೇ ಅವರು ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿ ಹೊರಹಾಕಿದ್ದಾರೆ. ಪಾಕಿಸ್ತಾನದ ಆರ್ಮಿ ಸುಮಾರು 35ರಿಂದ 40 ಮೃತ ಶವಗಳನ್ನ ಬೇರೆಡೆ ರವಾನೆ ಮಾಡಿದ್ದು, ದಾಳಿಯಲ್ಲಿ 40ರಿಂದ 50 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇಟಾಲಿಯನ್ ಜರ್ನಲಿಸ್ಟ್ ಆಗಿರುವ ಫ್ರಾನ್ಸಿಸ್ಕೋ ಮರಿನೋ, ಭಾರತೀಯ ವಾಯುಪಡೆ ದಾಳಿ ನಡೆಸಿದ ಕೆಲ ಗಂಟೆಗಳಲ್ಲೇ ಸ್ಥಳಕ್ಕೆ ಪಾಕ್ ಆಂಬುಲೆನ್ಸ್ ಬಂದಿದ್ದು, ಸ್ಥಳದಲ್ಲಿ ಲಭ್ಯವಾದ ಮೊಬೈಲ್ ಫೋನ್ಗಳನ್ನ ತೆಗೆದು ಹಾಕಿದ್ದಾರೆ. ನಂತರ ಶವಗಳನ್ನ ಬೇರೆಡೆ ರವಾನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ ಪಾಕ್ ಭಾರತ ನಡೆಸಿರುವ ದಾಳಿಯಲ್ಲಿ ಯಾರು ಸಾವನ್ನಪ್ಪಿಲ್ಲ ಎಂದು ಹೇಳಿಕೆ ನೀಡಿತ್ತು.