ಮುಂಬೈ: ದೇಶದ ವಾಣಿಜ್ಯ ನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ನಗರದಲ್ಲಿ ಕೊರೊನಾ ಸಂಖ್ಯೆ ಲಕ್ಷದ ಹತ್ತಿರ ಬಂದಿದೆ. ಈ ನಡುವೆ ಇಲ್ಲಿನ ವಿಜಯಪುರ ತಾಲೂಕು ಪ್ರದೇಶದಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪಕ್ಷದ ನಾಯಕರು, ಮುಖಂಡರು ಸಾಮಾಜಿಕ ಅಂತರ ಮರೆತು ದೊಡ್ಡ ಪ್ರಮಾಣದಲ್ಲಿ ಸೇರಿ ಕೊರೊನಾ ಮತ್ತಷ್ಟು ಹೆಚ್ಚು ಹರಡಲು ಅನುವು ಮಾಡಿಕೊಟ್ಟಿದ್ದಾರೆ.
ಪಕ್ಷದ ನಾಯಕ ಅಖಿಲ್ ಸೇಥ್ ಅವರ ಮನೆ ಮುಂದೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು. ಈ ವೇಳೆ ಕೊರೊನಾ ಹರಡುವುದನ್ನು ತಡೆಯಲು ಅನುಸರಿಸಬೇಕಾದ ಬಹುಮುಖ್ಯ ನಿಯಮ ಸಾಮಾಜಿಕ ಅಂತರ ನಿರ್ಲಕ್ಷಿಸಿದ್ದು ಕಂಡು ಬಂತು. ತಮ್ಮ ನಾಯಕ ಕೊರೊನಾ ಮುಕ್ತರಾಗಿ ಮನೆಗೆ ಆಗಮಿಸಿದ್ದು, ಅನೇಕ ಮುಂದಿ ಜಮಾವಣೆಗೊಂಡಿದ್ದರು. ಪಟಾಕಿ ಸಿಡಿಸಿ, ಕೇಕೆ, ಶಿಳ್ಳೆ ಹಾಕಿ ಅವರೆಲ್ಲ ಸಂಭ್ರಮಿಸಿದ್ದಾರೆ. ಈ ವೇಳೆ ಅಲ್ಲಿದ್ದ ಅನೇಕರು ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನೇ ಗಾಳಿಗೆ ತೋರಿದ್ದಾರೆ.