ಭೋಪಾಲ್: ಭೋಪಾಲ್ನಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ವೈದ್ಯರು ಸ್ಕೂಟಿಯಲ್ಲಿ ಮನೆಗೆ ಬರುತ್ತಿದ್ದ ವೇಳೆ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.
ಸ್ಕೂಟಿಯಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ವೈದ್ಯರಿಗೆ ಪೊಲೀಸರಿಂದ ಥಳಿತ! - ಮಧ್ಯಪ್ರದೇಶ ಭೋಪಾಲ್
ಡ್ಯೂಟಿ ಮುಗಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ಇಬ್ಬರು ವೈದ್ಯರ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ವೈದ್ಯೆಯೊಬ್ಬರು ತಮ್ಮ ಸಹೋದ್ಯೋಗಿ ಜೊತೆ ಡ್ಯೂಟಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಏಮ್ಸ್ ಆಡಳಿತ ಮಂಡಳಿಗೆ ಅವರು ದೂರು ನೀಡಿದ್ದಾರೆ.
ಬುಧವಾರ ಸಂಜೆ ಡ್ಯೂಟಿ ಮುಗಿಸಿ ಇಬ್ಬರು ಸಾಕೇಂತ ನಗರದಲ್ಲಿದ್ದ ನಿವಾಸಕ್ಕೆ ತೆರಳುತ್ತಿದ್ದಾಗ ಅವರನ್ನ ತಡೆದಿರುವ ಪೊಲೀಸರು ಹೊರಗಡೆ ಬಂದಿರುವುದಕ್ಕೆ ಕಾರಣ ಕೇಳಿದ್ದಾರೆ. ಈ ವೇಳೆ ತಾವು ಏಮ್ಸ್ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ. ಈ ವೇಳೆ ಐಡಿ ಕಾರ್ಡ್ ಸಹ ತೋರಿಸಿದ್ದಾರೆ. ವೈದ್ಯರಾಗಿ ನೀವೂ ಈ ರೀತಿಯಾಗಿ ಹೊರಗಡೆ ಬಂದ್ರೆ ಕೊರೊನಾ ಹೇಗೆ ನಿಯಂತ್ರಣಕ್ಕೆ ಬರುತ್ತದೆ ಎಂದು ಪ್ರಶ್ನೆ ಮಾಡಿ ಹಲ್ಲೆ ನಡೆಸಿದ್ದಾರೆ.