ಕರ್ನಾಟಕ

karnataka

ಗೌನ್​, ಮಾಸ್ಕ್​ ತಯಾರಿಸಿ ಕೋವಿಡ್​ ಹೋರಾಟಕ್ಕೆ ಕೈಜೋಡಿಸಿದ ಜೈಲು ಹಕ್ಕಿಗಳು

By

Published : Apr 10, 2020, 6:14 PM IST

ತಿರುವನಂತಪುರಂ ಬಳಿಯ ಪೂಜಪ್ಪುರ ಕೇಂದ್ರ ಕಾರಾಗೃಹದ ಕೈದಿಗಳು ಗೌನ್​, ಮಾಸ್ಕ್​ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಖ್ಯಾತ ನಟ ಹಾಗೂ ವಸ್ತ್ರ ವಿನ್ಯಾಸಕಾರ ಇಂದ್ರನ್ ಅವರು ಜೈಲು ಕೈದಿಗಳಿಗೆ ಈ ಮಾಸ್ಕ್​, ಗೌನ್ ತಯಾರಿಸುವುದನ್ನು ಕಲಿಸಿಕೊಟ್ಟಿದ್ದಾರೆ.

prison inmates produce gowns
prison inmates produce gowns

ತಿರುವನಂತಪುರಂ: ಫೇಸ್​ ಮಾಸ್ಕ್​ಗಳನ್ನು ತಯಾರಿಸಿ ಕೊರೊನಾ ವೈರಸ್​ ಹೋರಾಟಕ್ಕೆ ಕೈಜೋಡಿಸಿದ್ದ ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳು ಈಗ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್​ ಸಿಬ್ಬಂದಿಗೆ ಅಗತ್ಯವಾದ ಗೌನ್​ ಹಾಗೂ ಯುನಿಫಾರ್ಮ್​ಗಳನ್ನು ತಯಾರಿಸಲು ಮುಂದಾಗಿದ್ದಾರೆ.

ಇಲ್ಲಿನ ಪೂಜಪ್ಪುರ ಬಳಿಯಿರುವ ಜೈಲಿಗೆ ಗೌನ್ ಹಾಗೂ ಯುನಿಫಾರ್ಮ್​ ತಯಾರಿಸಿಕೊಡುವಂತೆ ಆರ್ಡರ್​ ಬರಲಾರಂಭಿಸಿವೆ. ಶ್ರೀ ಚಿತ್ರ ತಿರುನಾಳ್ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ 500 ಗೌನ್​ಗಳನ್ನು ತಕ್ಷಣ ತಯಾರಿಸಿಕೊಡುವಂತೆ ಹೇಳಿದೆ.

ಖ್ಯಾತ ನಟ ಹಾಗೂ ವಸ್ತ್ರ ವಿನ್ಯಾಸಕಾರ ಇಂದ್ರನ್ ಅವರು ಜೈಲು ಕೈದಿಗಳಿಗೆ ಈ ಮುನ್ನ ಮಾಸ್ಕ್​ ತಯಾರಿಸುವುದನ್ನು ಕಲಿಸಿಕೊಟ್ಟಿದ್ದರು. ಈಗ ಮತ್ತೊಮ್ಮೆ ಜೈಲಿಗೆ ಭೇಟಿ ನೀಡಿದ ಅವರು, ಕೋವಿಡ್​ ಚಿಕಿತ್ಸಕರಿಗೆ ಬೇಕಾದ ವೈಯಕ್ತಿಕ ಸುರಕ್ಷತಾ ಉಡುಪುಗಳನ್ನು ಸುಲಭವಾಗಿ ತಯಾರಿಸುವ ವಿಧಾನ ತಿಳಿಸಿಕೊಟ್ಟಿದ್ದಾರೆ. ಇಬ್ಬರು ಕೈದಿಗಳು ಗೌನ್​ ಹೊಲಿಯುವ ಹಾಗೂ 23 ಜನ ಮಾಸ್ಕ್​ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

"ಶ್ರೀ ಚಿತ್ರ ತಿರುನಾಳ್ ಇನ್​ಸ್ಟಿಟ್ಯೂಟ್​ನವರೇ ಗೌನ್​ಗೆ ಬೇಕಾದ ಕಾಟನ್ ಮತ್ತು ಟೆರಿಕಾಟ್ ಫ್ಯಾಬ್ರಿಕ್ ನೀಡಿದ್ದರಿಂದ ಹೊಲಿಗೆಗೆ ನಾವು ಅಲ್ಪ ಪ್ರಮಾಣದ ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ." ಎಂದು ಪೂಜಪ್ಪುರ ಕೇಂದ್ರ ಕಾರಾಗೃಹದ ಸುಪರಿಂಟೆಂಡೆಂಟ್ ಬಿ. ಸುನೀಲಕುಮಾರ ತಿಳಿಸಿದ್ದಾರೆ.

ABOUT THE AUTHOR

...view details