ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಮತ್ತೆ ಪ್ರಾರಂಭವಾಗುತ್ತಿವೆ.
ಅಂತೂ 2 ತಿಂಗಳ ನಂತರ ಜಮ್ಮು - ಕಾಶ್ಮೀರದಲ್ಲಿ ಶಾಲೆಗಳು ಪುನಾರಂಭ! - ಶಾಲೆಗಳು ಪುನಾರಂಭ
ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್ನಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಪುನಾರಂಭವಾಗುತ್ತಿವೆ.
ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ 370ನೇ ವಿಧಿಯನ್ನ ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರ ಸ್ಥಬ್ದವಾಗಿತ್ತು. ಅಂದಿನಿಂದ 2 ತಿಂಗಳ ಕಾಲ ಶಾಲಾ ಕಾಲೇಜುಗಳು ಕೂಡ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದ್ರೆ ಇಂದಿನಿಂದ ಮತ್ತೆ ಶಾಲೆಗಳನ್ನ ಪುನಾರಂಭಿಸುವಂತೆ ಆದೇಶಿಸಲಾಗಿದೆ.
ಕಾಶ್ಮೀರದ ವಿಭಾಗೀಯ ಆಯುಕ್ತ ಬಶೀರ್ ಅಹ್ಮದ್ ಖಾನ್, ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಶಾಲಾ ಶಿಕ್ಷಣ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಶಿಕ್ಷಣ ಶುಲ್ಕ ಅಥವಾ ಬಸ್ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವುದಿಲ್ಲ ಎಂದು ತಿಳಿಸುವಂತೆ ಆದೇಶಿಸಿದ್ದಾರೆ.