ವಡೋದರಾ(ಗುಜರಾತ್): ಗುಜರಾತ್ನ ವಡೋದರಾ ಜಿಲ್ಲೆಯ ಆಯುಷಿ ಧೋಲಾಕಿಯಾ, 2019ರ ಮಿಸ್ ಟೀನ್ ಇಂಟರ್ನ್ಯಾಷನಲ್ ಆಗಿ ಹೊರಹೊಮ್ಮಿದ್ದಾರೆ. 27 ವರ್ಷಗಳ ಬಳಿಕ ಈ ಕಿರೀಟ ಮುಡಿಗೇರಿಸಿಕೊಂಡ ಏಷ್ಯಾದ ಮೊದಲ ತರುಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
'ಮಿಸ್ ಟೀನ್ ಇಂಟರ್ನ್ಯಾಷನಲ್' ಕಿರೀಟ ಮುಡಿಗೇರಿಸಿಕೊಂಡ ಭಾರತದ ಚೆಲುವೆ - ಗುಜರಾತ್ನ ವಡೋದರಾ ಜಿಲ್ಲೆಯ ಆಯುಷಿ ಧೋಲಾಕಿಯಾ
ಡಿ.13 ರಿಂದ 19ರ ವರೆಗೆ ನವದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಡೋದರಾ ಜಿಲ್ಲೆಯ ತರುಣಿ ಆಯುಷಿ ಧೋಲಾಕಿಯಾ, ಮಿಸ್ ಟೀನ್ ಇಂಟರ್ನ್ಯಾಷನಲ್ ಆಗಿ ಹೊರಹೊಮ್ಮಿದ್ದಾರೆ.
ಸೆ.20 ರಿಂದ 25ರ ವರೆಗೆ ಜೈಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ 31 ಸ್ಪರ್ಧಿಗಳನ್ನು ಹಿಂದಿಕ್ಕಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದೆ. ಇದಕ್ಕೂ ಮೊದಲು ನನಗೆ ಬೇರೆಲ್ಲೂ ಭಾಗವಹಿಸಿದ ಸ್ಪರ್ಧೆಯ ಅನುಭವವಿರಲಿಲ್ಲ. ಈಗ ಭಾರತವನ್ನು ಪ್ರತಿನಿಧಿಸಿ ಮಿಸ್ ಟೀನ್ ಇಂಟರ್ನ್ಯಾಷನಲ್ ಆಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ಸಾಧನೆ ಹಿಂದೆ ನನ್ನ ಪೋಷಕರಿದ್ದಾರೆ ಎಂದು ಆಯುಶಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
14 ರಿಂದ 19 ವರ್ಷದೊಳಗಿವ ತರುಣಿಯರಿಗಾಗಿ ನಡೆಯುವ 'ಮಿಸ್ ಟೀನ್ ಇಂಟರ್ನ್ಯಾಷನಲ್' ಸ್ಪರ್ಧೆ, ಡಿ.13 ರಿಂದ 19ರ ವರೆಗೆ ನವದೆಹಲಿಯಲ್ಲಿ ನಡೆದಿತ್ತು. ಇದರಲ್ಲಿ 22 ದೇಶಗಳು ಭಾಗವಹಿಸಿದ್ದವು.