ಲಖನೌ(ಉತ್ತರಪ್ರದೇಶ) : ತಬ್ಲಿಘಿ ಜಮಾತ್ ವಿರುದ್ಧ ಮಾತನಾಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಯಾಗ್ರಾಜ್ನ ಕರೇಲಿ ಪ್ರದೇಶದ ಟೀ ಸ್ಟಾಲ್ ಒಂದರ ಬಳಿ ಘಟನೆ ನಡೆದಿದ್ದು, ಮೃತನನ್ನು ಲೌತಾನ್ ನಿಷಾದ್ ಎಂದು ಗುರ್ತಿಸಲಾಗಿದೆ.
ತಬ್ಲಿಘಿ ಜಮಾತ್ ವಿರುದ್ಧ ಮಾತಾಡಿದ್ದಕ್ಕೆ ಶೂಟೌಟ್: ಪ್ರಯಾಗ್ರಾಜ್ನಲ್ಲಿ ವ್ಯಕ್ತಿ ಸಾವು - ಉತ್ತರ ಪ್ರದೇಶ ಸಿಎಂ
ತಬ್ಲಿಘಿ ಜಮಾತ್ ವಿರುದ್ಧ ಮಾತನಾಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕೊಂದ ಆರೋಪಿ ವಿರುದ್ಧ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆಗೆ ಲಾಕ್ ಡೌನ್ ವೇಳೆ ಟೀ ಅಂಗಡಿ ಯಾಕೆ ತೆರೆದಿದ್ದರು ಎಂಬುದರ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಸ್ಪಷ್ಟನೆ ಕೇಳಿದ್ದು ಟೀ ಅಂಗಡಿಯ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕೆಲ ದಿನಗಳ ಹಿಂದೆ ದೆಹಲಿಯ ನಿಜಾಮುದ್ದೀನ್ನ ಮರ್ಕಾಜ್ ಕಟ್ಟಡದಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿತ್ತು. ಈ ಕಾರ್ಯಕ್ರಮದ ವೇಳೆ ಕೊರೊನಾ ಸೋಂಕು ಬಹುಪಾಲು ಮಂದಿಗೆ ಹರಡಿತ್ತು. ಸಾವಿರಾರು ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.