ಡಾರ್ಜಲಿಂಗ್:ಸಾಕುನಾಯಿಗಳನ್ನು ಹೆಚ್ಚಾಗಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದೇ ಕರೆಯಲಾಗುತ್ತದೆ. ಅದಕ್ಕೆ ಒಂದು ಬಲವಾದ ಕಾರಣವಿದೆ. ಏಕೆಂದರೆ ಈ ನಾಲ್ಕು ಕಾಲಿನ ಜೀವಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮನುಷ್ಯರನ್ನು ರಕ್ಷಿಸುತ್ತವೆ. ಅದನ್ನು ನೋಡಿದ್ದೇವೆ.
ಇದಕ್ಕೆ ಪುಷ್ಟಿ ನೀಡುವಂತಹ ಘಟನೆ ಡಾರ್ಜಲಿಂಗ್ನಲ್ಲಿ ಜರುಗಿದೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಡಾರ್ಜಿಲಿಂಗ್‌ನಲ್ಲಿ ಆಗಸ್ಟ್ 14 ರಂದು ಮನೆಗೆ ನುಗ್ಗಿದ ಚಿರತೆಯಿಂದ ತಮ್ಮ ಮನೆ ಮಾಲೀಕರನ್ನು ರಕ್ಷಿಸಿದೆ. ಹಲ್ಲೆಗೊಳಗಾದ ಸಾಕು ನಾಯಿ ತನ್ನ ಮಾಲೀಕರಾದ ಅರುಣಾ ಲಾಮಾ ಅವರ ಪ್ರಾಣ ಉಳಿಸಿ ದೊಡ್ಡ ಸಾಹಸವನ್ನೇ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾಯಿಯ ಸಾಹಸವನ್ನು ಕೊಂಡಾಡಿದ್ದಾರೆ.
ಆ ಸಾಕು ನಾಯಿಯ ಹೆಸರು ಟೈಗರ್. ಖಂಡಿತವಾಗಿಯೂ ಅದರ ಹೆಸರಿಗೆ ತಕ್ಕಂತೆ ವಾಸಿಸಿದೆ ಎಂಬುದೂ ವಿಶೇಷವಾಗಿದೆ. ಮನೆಯ ಮಾಲೀಕರಾದವರು ಅರುಣಾ ಲಾಮಾ. ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಅರುಣಾಳ ಮಗಳು, ನನ್ನ ತಾಯಿ ಕೆಳಮಹಡಿಗೆ ಹೋಗುತ್ತಿದ್ದಾಗ ಕಣ್ಣುಗಳು ಹೊಳೆಯುತ್ತಿದ್ದನ್ನು ಗಮನಿಸಿದ್ದಳು. ಆದರೆ, ಚಿರತೆ ಎಂಬುದು ಗೊತ್ತಾಗಲಿಲ್ಲ. ಏಕಾಏಕಿ ದಾಳಿ ಮಾಡಿದೆ. ಇದರಿಂದ ಬೆಚ್ಚಿಬಿದ್ದ ಅಮ್ಮ ಕಿರುಚಲಾರಂಭಿಸಿದ್ದಾರೆ. ಬಳಿಕ ನಾಯಿ ಬೊಗಳುತ್ತಾ ಬಂದು ಚಿರತೆಯನ್ನು ಓಡಿಸಿದೆ ಎಂದು ಹೇಳಿದರು.
ಮನೆಯೊಡತಿ ಮನೆಯಲ್ಲಿದ್ದರು. ಸಾಕು ನಾಯಿ ಹೈ ಅಲರ್ಟ್ ಆಗಿತ್ತು. ಆದರೂ ಚಿರತೆಯೊಂದು ಮನೆಯೊಳಗೆ ನುಸುಳಿತ್ತು. ಇದು ಅರುಣಾ ಲಾಮಾ ಅವರಿಗೆ ಗೊತ್ತಿರಲಿಲ್ಲ. ಕೆಳ ಮಹಡಿಗೆ ಹೋಗುತ್ತಿದ್ದಾಗ ಚಿರತೆ ದಾಳಿ ಗಾಯಗೊಳಿಸಿತ್ತು. ಆಗ ಸಾಕು ನಾಯಿ ಚಿರತೆಯನ್ನು ಓಡಿಸಿ ಅನ್ನ ಹಾಕಿದವರನ್ನ ಪ್ರಾಣಾಪಾಯದಿಂದ ಕಾಪಾಡಿದೆ.
ಆ ಸಂದರ್ಭದಲ್ಲಿ ಚಿರತೆ ನಾಯಿಯ ಮೇಲೂ ದಾಳಿ ನಡೆಸಿದೆ. ಆದರೂ ಪಟ್ಟು ಬಿಡದೆ ಚಿರತೆಯೊಂದಿಗೆ ಹೋರಾಡಿ ಗೆಲುವು ಸಾಧಿಸಿದೆ. ನಾಯಿಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಟ್ವಿಟಿಗರು, ಇದೊಂದು ಸ್ಫೂರ್ತಿದಾಯಕ ಕಥೆ ಎಂದು ಬರೆದಿದ್ದಾರೆ. ಅಲ್ಲದೆ, ನಾಯಿ ಎಂದು ಆ ಪ್ರಾಣಿಯನ್ನು ಕಡೆಗಣಿಸಬಾರದು ಎಂದೂ ಕೆಲವರು, ನಾಯಿ ನಿಷ್ಠಾವಂತ ಮತ್ತು ಪ್ರೀತಿಯ ಸ್ನೇಹಿತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದೂ ಕೆಲವರು ಫೋಸ್ಟ್ ಮಾಡಿದ್ದಾರೆ.