ಗುಂಟೂರು(ಆಂಧ್ರಪ್ರದೇಶ): ತನಗೆ ಕೊರೊನಾ ತಗುಲಿದೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರುನಲ್ಲಿ ನಡೆದಿದೆ.
ತನಗೆ ಕೊರೊನಾ ತಗುಲಿದ್ದು, ಅದು ಇಡೀ ಗ್ರಾಮದ ಜನರಿಗೆ ಹಬ್ಬುವುದರಿಂದ ಎಲ್ಲರೂ ಸಾವನ್ನಪ್ಪಲಿದ್ದಾರೆ ಎಂಬ ಅನುಮಾನದಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊರೊನಾ ತಗುಲಿದೆ ಎಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಗುಂಟೂರು ಜಿಲ್ಲೆಯ 55 ವರ್ಷದ ಅಕ್ಕಲ್ ವೆಂಕಟೇಶ್ ಈ ನಿರ್ಧಾರ ತೆಗೆದುಕೊಂಡು ಸಾವನ್ನಪ್ಪಿರುವ ವ್ಯಕ್ತಿ. ಕಳೆದೆರಡು ದಿನಗಳ ಹಿಂದೆ ಹೈದರಾಬಾದ್ನಿಂದ ತನ್ನ ಗ್ರಾಮ ಕೋಟಿಪಲ್ಯಕ್ಕೆ ತೆರಳಿದ್ದ ಈ ವ್ಯಕ್ತಿಯಲ್ಲಿ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡಿತ್ತು. ತಡರಾತ್ರಿ ತನ್ನ ಮಗನಿಗೆ ಫೋನ್ ಕಾಲ್ ಮಾಡಿ ತನೆಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ನಾನು ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಮಾಡಿದ್ದೇನೆ. ನಾನು ಸಾವನ್ನಪ್ಪಿದರೇ ನೀವೂ ದೂರದಿಂದಲೇ ನನ್ನ ಅಂತ್ಯಕ್ರಿಯೆ ನಡೆಸಿ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ.
ತಂದೆ ಫೋನ್ ಮಾಡಿದ್ದ ಸ್ಥಳಕ್ಕೆ ಹೋಗುವಷ್ಟರಲ್ಲಿ ವೆಂಕಟೇಶ್ ಸಾವನ್ನಪ್ಪಿದ್ದು, ಆತನ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.