ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಸಾಕಷ್ಟು ವೈರಸ್‌ಗಳ ನಡುವೆ ಕೆಲವೇ ಕೆಲವು ಆ್ಯಂಟಿ ವೈರಸ್‌ಗಳು

ಇಷ್ಟು ಅತ್ಯಾಧುನಿಕ ಜಗತ್ತಿನಲ್ಲಿಯೂ ಆಂಟಿವೈರಲ್ ಔಷಧಿಗಳ ಅಭಿವೃದ್ಧಿ ಏಕೆ ತುಂಬಾ ಜಟಿಲವಾಗಿದೆ? ಪ್ರತಿಜೀವಕಗಳಿಂದ ಅವು ಭಿನ್ನವಾಗಿರುವುದು ಹೇಗೆ? ಉತ್ತರವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ರೂಪವಿಜ್ಞಾನದ ಗುಣಲಕ್ಷಣಗಳಲ್ಲಿದೆ.

few anti-virus
ಆ್ಯಂಟಿ ವೈರಸ್‌ಗಳು

By

Published : May 13, 2020, 12:16 PM IST

ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಉತ್ತುಂಗದಲ್ಲಿದ್ದರೂ, ಕೊರೊನಾಗೆ ಪರಿಹಾರವನ್ನು ಕಂಡುಹಿಡಿಯಲು ನಮಗೆ ಏಕೆ ಸಾಧ್ಯವಾಗುತ್ತಿಲ್ಲ? ಆ್ಯಂಟಿ ವೈರಸ್‌ ಸಂಶೋಧನೆಯಲ್ಲಿ ವೈದ್ಯಕೀಯ ವಿಜ್ಞಾನ ಏಕೆ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿಲ್ಲ? ಸಾಂಕ್ರಾಮಿಕ ರೋಗವು ಅನಿಯಂತ್ರಿತವಾಗಿರುವ ಹೊತ್ತಿನಲ್ಲಿ ಮೇಲಿನ ಈ ಪ್ರಶ್ನೆಗಳು ಎಲ್ಲರ ಮನಸ್ಸಿನಲ್ಲಿ ಆಗಾಗ ಉದ್ಭವಿಸುವುದು ಸಹಜವಾಗಿದೆ.

ಅದು ಎರಡನೇ ಮಹಾಯುದ್ಧ ಮುಗಿಯುವ ಸಮಯ. ಅದಾದ ಸ್ವಲ್ಪ ಸಮಯದ ನಂತರ, ಪೆನ್ಸಿಲಿನ್ ಎಂಬ ಔಷಧಿಯನ್ನು ಕಂಡುಹಿಡಿಯಲಾಯಿತು. ಲಕ್ಷಾಂತರ ಸೈನಿಕರನ್ನು ಸೋಂಕಿನಿಂದ ರಕ್ಷಿಸಿದ ಮೊದಲ ಪ್ರತಿಜೀವಕ ಅದು. ಅಂದಿನಿಂದ, ಅನೇಕ ಜೀವ ಉಳಿಸುವ ಔಷಧಗಳು ಮನುಷ್ಯರ ರಕ್ಷಣೆಗೆ ಧಾವಿಸಿವೆ. ಹಲವಾರು ರೋಗನಿರೋಧಕ ಔಷಧಗಳು ವಿವಿಧ ರೋಗಗಳನ್ನು ನಿವಾರಿಸುವ ಮೂಲಕ ಮನುಕುಲಕ್ಕೆ ಕೊಡುಗೆ ನೀಡಿದ್ದರೂ, ಆ್ಯಂಟಿವೈರಲ್ ಔಷಧಿಗಳ ವಿಷಯದಲ್ಲಿ ವೈದ್ಯಕೀಯ ಜಗತ್ತು ಈಗಲೂ ಹೆಚ್ಚಿನ ಪ್ರಗತಿಯನ್ನು ಸಾಧಿಸಿಲ್ಲ. ಪ್ರತಿ ಬಾರಿ ಎಚ್‌ಐವಿ, ಎಬೋಲಾ, ಸಾರ್ಸ್‌ ಅಥವಾ ನೀಫಾಗಳಂತಹ ಹೊಸ ವೈರಲ್ ಸೋಂಕು ಕಾಣಿಸಿಕೊಂಡು, ನಾವು ಸಂಪೂರ್ಣವಾಗಿ ಅಸಹಾಯಕರಾಗುತ್ತೇವೆ.

ಇಷ್ಟು ಅತ್ಯಾಧುನಿಕ ಜಗತ್ತಿನಲ್ಲಿಯೂ ಆಂಟಿವೈರಲ್ ಔಷಧಿಗಳ ಅಭಿವೃದ್ಧಿ ಏಕೆ ತುಂಬಾ ಜಟಿಲವಾಗಿದೆ? ಪ್ರತಿಜೀವಕಗಳಿಂದ ಅವು ಭಿನ್ನವಾಗಿರುವುದು ಹೇಗೆ? ಉತ್ತರವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ರೂಪವಿಜ್ಞಾನದ ಗುಣಲಕ್ಷಣಗಳಲ್ಲಿದೆ. ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ಬ್ಯಾಕ್ಟೀರಿಯಾಗಳು ಸೂಕ್ಷ್ಮಜೀವಿಗಳಾಗಿವೆ, ಅವು ಸ್ವತಃ ಬದುಕಬಲ್ಲದು ಮತ್ತು ಅಭಿವೃದ್ಧಿ ಹೊಂದುತ್ತವೆ. ಅವು ಪ್ರೊಕಾರ್ಯೋಟ್‌ಗಳಾಗಿದ್ದು, ಒಂದು ಕಡೆ ಮುಚ್ಚಿದ ಡಿಎನ್‌ಎ ವೃತ್ತದಿಂದ ಕೂಡಿದೆ. ಅವು ಮಾನವ ಜೀವಕೋಶಗಳಿಗೆ ಹೋಲುತ್ತಿದ್ದರೂ, ಕೆಲವು ವಿಶೇಷ ಗುಣಲಕ್ಷಣಗಳನ್ನು ಹೊಂದಿವೆ.

ಉದಾಹರಣೆಗೆ, ಅವು ಕೋಶದ ಪದರಗಳನ್ನು ಹೊಂದಿದ್ದು, ಪೆಪ್ಟಿಡೊಗ್ಲಿಕನ್ ಎಂಬ ಪಾಲಿಮರ್‌ನಿಂದ ಮಾಡಲ್ಪಟ್ಟಿದೆ. ಈ ಬ್ಯಾಕ್ಟೀರಿಯಾದ ಕೋಶ ಪದರವು ಯಾವುದೇ ಪ್ರತಿಜೀವಕ ಚಿಕಿತ್ಸೆಯ ಗುರಿಯಾಗಿದೆ. ಇದರರ್ಥ ಪ್ರತಿಜೀವಕಗಳು ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ಅಥವಾ ಅವುಗಳ ಬೆಳವಣಿಗೆಯನ್ನು ನಿಧಾನಗೊಳಿಸುವ ಮೂಲಕ ಮತ್ತು ಸ್ಥಗಿತಗೊಳಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಔಷಧ ಈ ಬ್ಯಾಕ್ಟೀರಿಯಾದ ದೇಹದೊಳಗೆ ಪ್ರವೇಶಿಸಲು ಪೆಪ್ಟಿಡೊಗ್ಲಿಕನ್ ಹೊಂದಿರುವ ಬ್ಯಾಕ್ಟೀರಿಯಾದ ಕೋಶ ಪರದೆಯ ಮೇಲೆ ದಾಳಿ ಮಾಡುವುದು ಅವಶ್ಯಕ.

ಸುರಕ್ಷಿತ ಮತ್ತು ಪರಿಣಾಮಕಾರಿ ಆ್ಯಂಟಿವೈರಲ್ ಔಷಧಿಗಳನ್ನು ವಿನ್ಯಾಸಗೊಳಿಸುವುದು ಕಷ್ಟ, ಏಕೆಂದರೆ ವೈರಸ್‌ಗಳು ಪುನರುತ್ಪಾದನೆಗೊಳ್ಳಲು ನಾವು ವಾಸಿಸುವ ಮನುಷ್ಯನ ದೇಹದ ಕೋಶಗಳನ್ನು ಬಳಸುತ್ತವೆ. ವೈರಸ್‌ಗಳು ತಮ್ಮದೇ ಆದ ಜೀವರಾಸಾಯನಿಕ ಕಾರ್ಯವಿಧಾನಗಳನ್ನು ಹೊಂದಿರದ ಕಾರಣ, ಅವು ಆತಿಥೇಯ ಕೋಶಗಳನ್ನು ಪ್ರವೇಶಿಸಿ ಆ ಕಾರ್ಯಾಚರಣೆಯ ವ್ಯವಸ್ಥೆಯನ್ನು ತಮ್ಮ ಜೀವನ ಪ್ರಕ್ರಿಯೆಗಳಿಗೆ ಬಳಸುತ್ತವೆ. ವೈರಸ್‌ಗಳು ಸಂತಾನೋತ್ಪತ್ತಿ ಮಾಡಲು ತಮ್ಮ ಆನುವಂಶಿಕ ವಸ್ತುವನ್ನು ಮಾನವ ಜೀವಕೋಶದ ಡಿಎನ್‌ಎಗೆ ಬೆರೆಸುವುದರಿಂದ, ವೈರಸ್ ಅನ್ನು ಆತಿಥೇಯ ಕೋಶದಿಂದ ಬೇರ್ಪಡಿಸುವುದು ಕಠಿಣವಾಗಿದೆ. ಆ್ಯಂಟಿವೈರಲ್‌ಗಳ ಬೆಳವಣಿಗೆಯಲ್ಲಿ ಇದು ಪ್ರಮುಖ ಅಡಚಣೆಯಾಗಿದೆ.

ಕೆಲವು ವೈರಸ್‌ಗಳು ತಾವು ಒಳಹೊಕ್ಕ ದೇಹದಲ್ಲಿ ಸುಪ್ತವಾಗಿದ್ದರೆ, ಇನ್ನೂ ಕೆಲವು ನಿಧಾನವಾಗಿ ಬೆಳೆಯುತ್ತವೆ. ಕೆಲವು ವೈರಸ್‌ಗಳು ಆತಿಥೇಯ ಕೋಶಗಳನ್ನು ಸ್ಫೋಟಿಸಿ ದೇಹದ ಇತರ ಭಾಗಗಳಿಗೆ ಸೋಂಕು ತಗುಲಿಸುವಷ್ಟು ವೇಗವಾಗಿ ಪುನರಾವರ್ತನೆಗೊಳ್ಳಬಹುದು. ವೈರಸ್ ಡಿಎನ್‌ಎ ಸಂಶ್ಲೇಷಣೆಯನ್ನು ತಡೆಯುವ ಮೂಲಕ ಹೆಚ್ಚಿನ ಌಂಟಿವೈರಲ್ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರತಿರಕ್ಷಣಾ ಕೋಶಗಳ ಮೇಲೆ ಌಂಟಿವೈರಲ್‌ಗಳ ಇಂತಹ ಪ್ರತಿಬಂಧಕ ಪರಿಣಾಮಗಳು ರೋಗನಿರೋಧಕ ಶಕ್ತಿ ಕುಗ್ಗಲು ಕಾರಣವಾಗಬಹುದು.

ಆ್ಯಂಟಿವೈರಲ್‌ಗಳು ವೈರಸ್ ಜೀವನ ಚಕ್ರವನ್ನು ಗುರಿಯಾಗಿಸಬಹುದಾದರೆ ವೈರಸ್‌ಗಳನ್ನು ನಿರ್ಮೂಲನೆ ಮಾಡುವುದು ಕಷ್ಟವೇನಲ್ಲ. ಆದರೆ ದೊಡ್ಡ ತೊಡಕು ಎಂದರೆ ಯಾವುದೇ ಆ್ಯಂಟಿವೈರಲ್ ಔಷಧವು ವೈರಸ್‌ಗಳನ್ನು ನಿರ್ಮೂಲನೆ ಮಾಡುವ ಪ್ರಕ್ರಿಯೆಯಲ್ಲಿ ಆತಿಥೇಯ ಕೋಶಗಳನ್ನು ಹಾನಿಗೊಳಿಸುವುದು. ಪ್ರಸ್ತುತ ಲಭ್ಯವಿರುವ ಹೆಚ್ಚಿನ ಌಂಟಿವೈರಲ್ ಔಷಧಿಗಳು ಎಚ್‌ಐವಿ, ಹರ್ಪಿಸ್ ವೈರಸ್‌ಗಳು ಮುಂತಾದ ವೈರಸ್‌ನ ನಿರ್ದಿಷ್ಟ ಸ್ವರೂಪವನ್ನು ಆಧರಿಸಿ ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ, ಈ ಔಷಧಿಗಳ ಪರಿಣಾಮವು ವೈರಸ್​ನ ಆತಿಥೇಯ ಕೋಶದ ಮೇಲೆ ಅವಲಂಬಿತವಾಗಿರುತ್ತದೆ. ವೈರಸ್ ಅನ್ನು ಹೆಚ್ಚು ಅವಲಂಬಿಸಿರುವುದರಿಂದ, ಈ ಔಷಧಿಗಳು ಕೆಲಸ ಮಾಡುವ ಸಾಧ್ಯತೆ ಕಡಿಮೆ. ದುರದೃಷ್ಟವಶಾತ್, ವೈರಸ್‌ಗಳ ರೂಪವಿಜ್ಞಾನ ಮತ್ತು ಸ್ವರೂಪವು ಒಂದು ಕುಟುಂಬದಿಂದ ಮತ್ತೊಂದು ಕುಟುಂಬಕ್ಕೆ ಬಹಳ ವ್ಯತ್ಯಾಸಗೊಳ್ಳುತ್ತದೆ. ಈ ಎಲ್ಲಾ ಕಾರಣಗಳು ಆಂಟಿವೈರಲ್‌ಗಳ ಅಭಿವೃದ್ಧಿಯನ್ನು ಸಂಕೀರ್ಣ ಪ್ರಕ್ರಿಯೆಯನ್ನಾಗಿ ಮಾಡುತ್ತದೆ.

ಪ್ರಸ್ತುತ, ಕೋವಿಡ್‌-19 ರೋಗಿಗಳಿಗೆ ರೆಮ್‌ಡೆಸಿವಿರ್, ಲೋಪಿನಾವಿರ್, ರಿಟೊನವಿರ್ ಮತ್ತು ರಿಬಾವಿರಿನ್ ನಂತಹ ಆ್ಯಂಟಿವೈರಲ್‌ಗಳೊಂದಿಗೆ ಪ್ರಾಯೋಗಿಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅವುಗಳ ಕೆಲಸ ಮಾಡುತ್ತಿವೆಯೆಂದು ತೋರುತ್ತದೆಯಾದರೂ, ಅವುಗಳ ಫಲಿತಾಂಶಗಳ ಪೂರ್ಣ ವ್ಯಾಪ್ತಿಯನ್ನು ದೊಡ್ಡ-ಪ್ರಮಾಣದ ಪ್ರಯೋಗಗಳಿಂದ ಮಾತ್ರ ತಿಳಿಯಬಹುದು. ಕೋವಿಡ್‌-19 ಗಾಗಿ ಹೊಸ ಆಂಟಿವೈರಲ್ ಔಷಧದ ಆವಿಷ್ಕಾರ ಮಾತ್ರ ಗಮನಾರ್ಹ ಬದಲಾವಣೆಯನ್ನು ತರಬಹುದು. ಇದಕ್ಕಾಗಿ, ವೈರಸ್‌ನ ರಚನೆ ಮತ್ತು ಅದು ಪ್ರವೇಶ ಪಡೆಯುವ ಆತಿಥೇಯ ಕೋಶಗಳೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಅವಶ್ಯಕ. ಕೊರೊನಾ ವೈರಸ್‌ನ ಜೀನ್‌ ಅನ್ನು ಎಷ್ಟು ಬೇಗನೆ ಮ್ಯಾಪ್ ಮಾಡಬಹುದೋ, ಅಷ್ಟು ತ್ವರಿತವಾಗಿ ನಿರ್ಮೂಲನೆ ಮಾಡುವ ಔಷಧ ಕಂಡುಹಿಡಿಯಬಹುದು. ಕರೋನಾಗೆ ಪರಿಹಾರವನ್ನು ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಡಬ್ಲ್ಯುಎಚ್‌ಒ ವಿವಿಧ ದೇಶಗಳ ಸಂಶೋಧಕರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಪರಿಹಾರವನ್ನು ಕಂಡುಕೊಳ್ಳುವವರೆಗೂ, ನಾವು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಅಳವಡಿಸಿಕೊಳ್ಳುವುದು ಅವಶ್ಯಕ.

ABOUT THE AUTHOR

...view details