ರಾಯಗಢ(ಮಹಾರಾಷ್ಟ್ರ):ರಾಯಗಢ ಜಿಲ್ಲೆಯಲ್ಲಿ 5 ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿತಗೊಂಡಿದ್ದು, ಅದರಲ್ಲಿದ್ದ 47 ಕುಟುಂಬದ 200 ಮಂದಿ ಅವಶೇಷದಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ 15 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ, 47 ಕುಟುಂಬದ 200ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ! - ಐದು ಅಂತಸ್ತಿನ ಕಟ್ಟಡ
ಮಹಾರಾಷ್ಟ್ರದಲ್ಲಿ ಆರು ವರ್ಷದ ಹಳೆಯ ಕಟ್ಟಡವೊಂದು ಕುಸಿದ ಬಿದ್ದ ಪರಿಣಾಮ ಅನೇಕ ಕುಟುಂಬದ ಸದಸ್ಯರು ಅವಶೇಷದಡಿ ಸಿಲುಕಿಕೊಂಡಿದ್ದಾರೆ.
five storey building
ಸ್ಥಳದಲ್ಲಿ ಎನ್ಡಿಆರ್ಎಫ್ ಹಾಗೂ ಸ್ಥಳೀಯ ಪೊಲೀಸರು ಭರದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಅನೇಕ ಜನರ ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಕಳೆದ ಒಂದೇ ವಾರದಲ್ಲಿ ನಡೆದಿರುವ ಎರಡನೇ ಘಟನೆ ಇದಾಗಿದ್ದು, ಆಗಸ್ಟ್ 18ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದು ಓರ್ವ ಸಾವನ್ನಪ್ಪಿದ್ದನು.
ಸಂಜೆ 6.50ರ ವೇಳೆ 5 ಅಂತಸ್ತಿನ ನಾಲ್ಕು ಕಟ್ಟಡ ಕುಸಿತಗೊಂಡಿದ್ದು, ಸತತವಾಗಿ ಸುರಿದ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮಹಾರಾಷ್ಟ್ರ ಸಚಿವ ಅದಿತಿ ಎಸ್ ತತ್ಕರೆ ಮಾಹಿತಿ ನೀಡಿದ್ದಾರೆ.