ಎರಡು ಗಂಡು ಹುಲಿಗಳ ನಡುವೆ ನಡೆದ ಉಗ್ರ ಕಾಳಗ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಏಳು ವರ್ಷದ ಹಳೆಯ ವಿಡಿಯೋವನ್ನು ಇಂದು ಬೆಳಿಗ್ಗೆ ಐಎಫ್ಎಸ್ ಅಧಿಕಾರಿ ಸುಧಾ ರಾಮೆನ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ಗಂಡು ಹುಲಿಗಳ ನಡುವಿನ ಉಗ್ರ ಕಾಳಗ: ಮೈ ಜುಮ್ಮೆನಿಸುವ ವಿಡಿಯೋ ನೋಡಿ.. - ಹುಲಿಗಳ ಕಾಳಗ
ಈ ವಿಡಿಯೋವನ್ನು ಹೆಲೆನಾ ವಾಟ್ಕಿನ್ಸ್ ಅವರು 2013ರಲ್ಲಿ ದಕ್ಷಿಣ ಆಫ್ರಿಕಾದ ಟೈಗರ್ ಕ್ಯಾನ್ಯನ್ ವನ್ಯಜೀವಿ ಮತ್ತು ಸಫಾರಿ ಉದ್ಯಾನವನದಲ್ಲಿ ಸೆರೆಹಿಡಿದಿದ್ದರು.
ಹುಲಿಗಳ ಕಾಳಗ
ಈ ವಿಡಿಯೋವನ್ನು ಹೆಲೆನಾ ವಾಟ್ಕಿನ್ಸ್ ಅವರು 2013ರಲ್ಲಿ ದಕ್ಷಿಣ ಆಫ್ರಿಕಾದ ಟೈಗರ್ ಕ್ಯಾನ್ಯನ್ ವನ್ಯಜೀವಿ ಮತ್ತು ಸಫಾರಿ ಉದ್ಯಾನವನದಲ್ಲಿ ಚಿತ್ರೀಕರಿಸಿದ್ದರು. ಇದು ಈಗಾಗಲೇ ಯೂಟ್ಯೂಬ್‌ನಲ್ಲಿ 7 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ವಿಡಿಯೋದಲ್ಲಿ ಎರಡು ಗಂಡು ಹುಲಿಗಳು ತಮ್ಮ ಪ್ರಾಬಲ್ಯಕ್ಕಾಗಿ ಪರಸ್ಪರ ಫೈಟ್ ಮಾಡುತ್ತಿವೆ.
ಹುಲಿಗಳು ಜಗಳವಾಡುವುದನ್ನು ಇದುವರೆಗೆ ನೋಡಿಲ್ಲ, ಅದು ಕುಸ್ತಿಗಿಂತ ಕಡಿಮೆಯಿಲ್ಲ. ಅಂತಹ ಕಾದಾಟಗಳ ಮೂಲಕವೇ ಅವು ಪ್ರಾಬಲ್ಯವನ್ನು ಸ್ಥಾಪಿಸುತ್ತವೆ ಎಂದು ಸುಧಾ ರಾಮೆನ್ ವಿಡಿಯೋ ಹಂಚಿಕೊಂಡಾಗ ಬರೆದಿದ್ದಾರೆ.