ದಿನಾಜಪುರ(ಪಶ್ಚಿಮ ಬಂಗಾಳ):ದಕ್ಷಿಣ ದಿನಾಜ್ಪುರ್ ಜಿಲ್ಲೆಯ ಕುಮರ್ಗಂಜ್ನಲ್ಲಿ 20 ವರ್ಷದ ಯುವತಿವೋರ್ವಳ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಟ್ಟ ಸ್ಥಿತಿಯಲ್ಲಿ 20 ವರ್ಷದ ಯುವತಿಯ ಮೃತದೇಹ ಪತ್ತೆ! - ಪಶ್ಚಿಮ ಬಂಗಾಳ ಕ್ರೈಂ ಸುದ್ದಿ
ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ್ ಜಿಲ್ಲೆಯ ಕುಮರ್ಗಂಜ್ನಲ್ಲಿ 20 ವರ್ಷದ ಯುವತಿವೋರ್ವಳ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹರಿತವಾದ ಸಾಧನಗಳಿಂದ ಇರಿದಿರುವಂತೆ ಯುವತಿಯ ದೇಹದ ಮೇಲೆ ಗುರುತುಗಳು ಕಂಡು ಬಂದಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಯುವತಿಯ ಸುಟ್ಟದೇಹ ಪತ್ತೆ.
ಮೃತದೇಹದ ಬಳಿ ನಾಯಿಗಳು ಇರುವುದನ್ನು ಕುಮರ್ಗಂಜ್ನ ಸಫಾನಗರ ನಿವಾಸಿಗಳು ಗಮನಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಹರಿತವಾದ ಸಾಧನಗಳಿಂದ ಇರಿದಿರುವಂತೆ ಯುವತಿಯ ದೇಹದ ಮೇಲೆ ಗುರುತುಗಳು ಕಂಡು ಬಂದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ಮೃತದೇಹದ ಮೇಲೆ ರಕ್ತದ ಕಲೆಗಳಿರುವುದನ್ನೂ ಪೊಲೀಸರು ಗುರುತಿಸಿದ್ದಾರೆ. ಅಲ್ಲದೇ ಸುಟ್ಟ ದೇಹದ ಭಾಗಗಳು ಹರಡಿ ಬಿದ್ದಿದ್ದು, ರಾತ್ರಿ ಪ್ರಾಣಿಗಳು ದೇಹವನ್ನು ತಿಂದು ಈ ರೀತಿ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.