ನವದೆಹಲಿ:ದೇಶದ ಪ್ರಮುಖ ನಗರಗಳಲ್ಲಿ ನಿನ್ನೆಯಿಂದ ವಿಶೇಷ ರೈಲುಗಳ ಸಂಚಾರ ಆರಂಭಗೊಂಡಿದ್ದು, 8 ರೈಲುಗಳು ಪ್ರಯಾಣಿಕರನ್ನು ಅವರ ತವರು ತಲುಪಿಸಿವೆ.
ಮೊದಲ ದಿನವೇ ವಿಶೇಷ ರೈಲಿನಲ್ಲಿ 8 ಸಾವಿರ ಮಂದಿ ಪ್ರಯಾಣ: ರೈಲ್ವೆ ಇಲಾಖೆ ಮಾಹಿತಿ
ದೇಶಾದ್ಯಂತ ನಿನ್ನೆಯಿಂದ ವಿಶೇಷ ಪ್ರಯಾಣಿಕ ರೈಲುಗಳ ಓಡಾಟ ಆರಂಭಗೊಂಡಿದ್ದು, ಮೊದಲ ದಿನವೇ ಬರೋಬ್ಬರಿ 8 ಸಾವಿರ ಪ್ರಯಾಣಿಕರು ಪ್ರಯಾಣಿಸಿರುವುದಾಗಿ ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
Indian Railways
ಛತ್ತೀಸ್ಗಢದ ವಿಲಾಸ್ಪುರ,ಆಸ್ಸೋಂ ದಿಬ್ರುಗಢ ಹಾಗೂ ಬೆಂಗಳೂರು, ಹೌರಾ, ರಾಜೇಂದ್ರ ನಗರ, ಮುಂಬೈ ಸೆಂಟ್ರಲ್, ಅಹಮದಾಬಾದ್ ಗೆ ರೈಲುಗಳು ಆರಂಭಗೊಂಡಿವೆ. 8 ರೈಲುಗಳಲ್ಲಿ ಒಟ್ಟು 8 ಸಾವಿರ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
24 ಗಂಟೆಯಲ್ಲಿ 169,039 ಟಿಕೆಟ್ ಬುಕ್ ಮಾಡಿದ್ದಾಗಿ ಇಲಾಖೆ ಹೇಳಿಕೊಂಡಿದೆ. ಉಳಿದಂತೆ ದೇಶದಲ್ಲಿ ಈಗಾಗಲೇ 575 ಶ್ರಮಿಕ್ ರೈಲು 680,000 ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಿದ್ದು, ಅವುಗಳ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದೆ.
Last Updated : May 13, 2020, 8:13 AM IST