ಕರ್ನಾಟಕ

karnataka

ETV Bharat / bharat

ಎಫ್‌ಎಒ 75ನೇ ವಾರ್ಷಿಕೋತ್ಸವ: 75 ರೂ. ನಾಣ್ಯ ಬಿಡುಗಡೆಗೊಳಿಸಲಿದ್ದಾರೆ ಪ್ರಧಾನಿ ಮೋದಿ

ಎಫ್‌ಎಒ 75ನೇ ವಾರ್ಷಿಕೋತ್ಸವದ ಸ್ಮರ್ಣಾರ್ಥ, ಭಾರತದ ದೀರ್ಘಕಾಲದ ಸಂಬಂಧವನ್ನು ಗುರುತಿಸುವ ಸಲುವಾಗಿ 75 ರೂ.ಗಳ ನಾಣ್ಯವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.

PM to release Rs 75 coin to mark 75th anniversary of FAO
75 ರೂ. ನಾಣ್ಯ ಬಿಡುಗಡೆಗೊಳಿಸಲಿದ್ದಾರೆ ಪ್ರಧಾನಿ ಮೋದಿ

By

Published : Oct 14, 2020, 5:02 PM IST

ನವದೆಹಲಿ:ಅಕ್ಟೋಬರ್ 16 ರಂದು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಎಫ್‌ಎಒ ಜೊತೆ ಭಾರತದ ದೀರ್ಘಕಾಲದ ಸಂಬಂಧವನ್ನು ಗುರುತಿಸುವ ಸಲುವಾಗಿ 75 ರೂ.ಗಳ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ.

ಇತ್ತೀಚೆಗೆ ಅಭಿವೃದ್ಧಿಪಡಿಸಿದ 8 ಬೆಳೆಗಳ 17 ಜೈವಿಕ ಪ್ರಭೇದಗಳನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. "ಇದು ಕೃಷಿ ಮತ್ತು ಪೋಷಣೆಗೆ ಸರ್ಕಾರವು ನೀಡಿದ ಹೆಚ್ಚಿನ ಆದ್ಯತೆಯನ್ನು ಸೂಚಿಸುತ್ತದೆ ಮತ್ತು ಇದು ಹಸಿವು, ಅಪೌಷ್ಟಿಕತೆ ಮತ್ತು ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಸಂಕಲ್ಪದ ಸಾಕ್ಷಿಯಾಗಿದೆ" ಎಂದು ಪ್ರಧಾನ ಮಂತ್ರಿಗಳ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಕಾರ್ಯಕ್ರಮಕ್ಕೆ ದೇಶಾದ್ಯಂತದ ಅಂಗನವಾಡಿ, ಕೃಷಿ ವಿಜ್ಞಾನ ಕೇಂದ್ರಗಳು, ಸಾವಯವ ಮತ್ತು ತೋಟಗಾರಿಕೆ ಮಿಷನ್‌ ಸಿಬ್ಬಂದಿ ಸಾಕ್ಷಿಯಾಗಲಿದ್ದು, ಕೇಂದ್ರ ಕೃಷಿ ಸಚಿವ, ಹಣಕಾಸು ಸಚಿವರು ಕೂಡ ಪಾಲ್ಗೊಳ್ಳಲಿದ್ದಾರೆ.

ಭಾರತವು ಎಫ್‌ಎಒ ಜೊತೆ ಐತಿಹಾಸಿಕ ಒಡನಾಟವನ್ನು ಹೊಂದಿದೆ. ಭಾರತೀಯ ನಾಗರಿಕ ಸೇವಾ ಅಧಿಕಾರಿ ಡಾ.ಬಿನಯ್ ರಂಜನ್ ಸೇನ್ 1956-1967ರ ಅವಧಿಯಲ್ಲಿ ಎಫ್‌ಎಒ ಮಹಾನಿರ್ದೇಶಕರಾಗಿದ್ದರು. 2020ರ ಶಾಂತಿ ನೊಬೆಲ್ ಪ್ರಶಸ್ತಿ ಗೆದ್ದ ವಿಶ್ವ ಆಹಾರ ಕಾರ್ಯಕ್ರಮವನ್ನು ಅವರ ಕಾಲದಲ್ಲಿ ಆರಂಭಿಸಲಾಗಿತ್ತು. 2016 ರಲ್ಲಿ ದ್ವಿದಳ ಧಾನ್ಯಗಳ ಅಂತಾರಾಷ್ಟ್ರೀಯ ವರ್ಷ ಮತ್ತು ಮಿಲ್ಲೆಟ್‌ಗಳ ಅಂತಾರಾಷ್ಟ್ರೀಯ ವರ್ಷ 2023ಕ್ಕೆ ಭಾರತದ ಪ್ರಸ್ತಾಪಗಳನ್ನು ಎಫ್‌ಎಒ ಅನುಮೋದಿಸಿದೆ.

ABOUT THE AUTHOR

...view details