ಕರ್ನಾಟಕ

karnataka

ETV Bharat / bharat

ಕಾಫಿ ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತಾ?

ಭಾರತದಲ್ಲಿ ಕಾಫಿ ಫೇಮಸ್​. ಕಾಫಿಯನ್ನು ನಾವು ಸೇವಿಸುವುದರಿಂದ ನಮ್ಮ ದೇಹದ ಕಾರ್ಯಕ್ಷಮತೆ ಮತ್ತು ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂಬುದು ಹಲವು ಅಧ್ಯಯನಗಳ ಮೂಲಕ ತಿಳಿದು ಬಂದಿದೆ.

ಕಾಫಿ
ಕಾಫಿ

By

Published : Jun 25, 2020, 6:47 PM IST

ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಗುವ ಈ ದಿನಗಳಲ್ಲಿ ಮಳೆಯ ತಂಪು ವಾತಾವರಣದಲ್ಲಿ ಮನೆಯಲ್ಲಿ ಕೂತು ಬಿಸಿಯಾದ ಕಾಫಿ ಕುಡಿಯಲು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ಹೀಗೆ ನಾವು ಸೇವಿಸುವ ಕಾಫಿಯಿಂದ ಅನೇಕ ಪ್ರಯೋಜನಗಳಿದ್ದು, ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಮತ್ತು ರೋಗ ನಿರೋಧಕಗಳು ಇದರಲ್ಲಿ ಅಧಿಕವಾಗಿವೆ.

ಶಕ್ತಿ ಹೆಚ್ಚಿಸುತ್ತದೆ:

ಕಾಫಿಯಲ್ಲಿ ಕೆಫೀನ್ ಎಂಬ ನೈಸರ್ಗಿಕ ಅಂಶವಿದ್ದು, ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ಆಯಾಸಗೊಳಿಸುವ ರಾಸಾಯನಿಕವನ್ನು ಕೆಫೀನ್ ತಡೆಯುತ್ತದೆ.

ದೈಹಿಕ ಕಾರ್ಯಕ್ಷಮತೆ ಸುಧಾರಿಸಲು ಸಹಾಯ:

ಕೆಫೀನ್ ರಕ್ತದಲ್ಲಿನ ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಇದರಿಂದ ವ್ಯಕ್ತಿಯ ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆಲ್​ಜೀಮರ್​​ ಮತ್ತು ಪಾರ್ಕಿನ್ಸನ್:

ಕಾಫಿಯನ್ನು ಕುಡಿಯುವುದರಿಂದ ಬುದ್ಧಿಮಾಂದ್ಯತೆ ಕಡಿಮೆಯಾಗಲಿದೆ. ಇದನ್ನು ಸೇವಿಸುವ ಜನರು ಆಲ್​ಜೀಮರ್​​ ಮತ್ತು ಪಾರ್ಕಿನ್ಸನ್​‌ನಂತಹ ನರ ಕ್ಷೀಣಗೊಳ್ಳುವ ಪರಿಸ್ಥಿತಿಗಳಿಂದ ಬಳಲುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ಹೇಳಿದೆ.

ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ:

ಟೈಪ್ 2 ಡಯಾಬಿಟಿಸ್ ಎನ್ನುವುದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸಿದೆ. ಅನೇಕ ವೀಕ್ಷಣಾ ಅಧ್ಯಯನಗಳು ಪ್ರತಿದಿನ ಕಾಫಿಯನ್ನು ಸೇವಿಸುವ ಜನರು ಹೆಚ್ಚು ಕುಡಿಯದವರಿಗಿಂತ ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಸಾಧ್ಯತೆ ಕಡಿಮೆ ಇದೆಯಂತೆ.

ಕಾಫಿ ಮತ್ತು ಯಕೃತ್​​:

ಪಿತ್ತಜನಕಾಂಗದ ಕ್ಯಾನ್ಸರ್ ಮತ್ತು ಸಿರೋಸಿಸ್, ದೀರ್ಘ ಕಾಲದ ಪಿತ್ತಜನಕಾಂಗದ ಹಾನಿಯನ್ನು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:

ಆಂಟಿಆಕ್ಸಿಡೆಂಟ್‌ಗಳು ಜೀವಕೋಶದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತವೆ. ಸ್ವತಂತ್ರ ರಾಡಿಕಲ್​ಗಳು ದೇಹದ ಮೇಲೆ ಆಕ್ರಮಣ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಕಾಫಿ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ಹಲವಾರು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಾಫಿ ಯಾವಾಗಲೂ ಆರೋಗ್ಯಕರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಅಧಿಕ ಪ್ರಮಾಣದಲ್ಲಿ ಇದರ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಕೂಡ ಬೀರಬಹುದು. ಆದ್ದರಿಂದ ಅಗತ್ಯ ಪ್ರಮಾಣದ ಕಾಫಿ ಕುಡಿಯುವುದು ಒಳ್ಳೆಯದು. ಅಲ್ಲದೆ ಉತ್ತಮ ಆರೋಗ್ಯವನ್ನು ಪಡೆಯಲು ನೀವು ಇದಕ್ಕೆ ಸಾಕಷ್ಟು ಸಕ್ಕರೆ ಸೇರಿಸದಿರುವುದು ಉತ್ತಮ.

ABOUT THE AUTHOR

...view details