ಭುವನೇಶ್ವರ: ಒಡಿಶಾದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಸೋಮವಾರ ಒಂದೇ ದಿನ ಸಿಡಿಲು ಬಡಿದು ಆರು ಮಂದಿ ಮೃತಪಟ್ಟಿದ್ದಾರೆ.
ಸಿಡಿಲಿಗೆ ಒಡಿಶಾದಲ್ಲಿ ಆರು ಮಂದಿಯ ದುರ್ಮರಣ: ರಕ್ಷಾ ಬಂಧನ ದಿನದಂದೇ ಅಣ್ಣ-ತಂಗಿ ಸಾವು! - ರಕ್ಷಾ ಬಂಧನ ದಿನದಂದೇ ಅಣ್ಣ-ತಂಗಿ ಸಾವು
ರಕ್ಷಾ ಬಂಧನ ದಿನದ ಪ್ರಯುಕ್ತ ಬಾಲಕಿಯೋರ್ವಳು ತನ್ನ ಸಹೋದರ ಸಂಬಂಧಿಗೆ ರಾಖಿ ಕಟ್ಟಲು ಹೋದಾಗ ಸಿಡಿಲು ಬಡಿದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಿಡಿಲಿಗೆ ಒಡಿಶಾದಲ್ಲಿ ಆರು ಮಂದಿಯ ದುರ್ಮರಣ
ಬಾಲಸೋರ್ ಮತ್ತು ಭದ್ರಾಕ್ ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಕ್ಕಳು, ಓರ್ವ ರೈತ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಾ ಬಂಧನ ದಿನದ ಪ್ರಯುಕ್ತ ನಿನ್ನೆ ಬಾಲಸೋರ್ನ ಮಂದಗಾಂವ್ ಗ್ರಾಮದ 12 ವರ್ಷದ ಬಾಲಕಿ 15 ವರ್ಷದ ತನ್ನ ಸಹೋದರ ಸಂಬಂಧಿಗೆ ರಾಖಿ ಕಟ್ಟಲು ಹೋದಾಗ ಸಿಡಿಲು ಬಡಿದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.