ಕರ್ನಾಟಕ

karnataka

ETV Bharat / bharat

ಡೆಡ್ಲಿ ಕೊರೊನಾದಿಂದ ಸಾವನ್ನಪ್ಪಿದ 57 ವರ್ಷದ ಎಎಸ್​ಐ

ಮಹಾಮಾರಿ ಕೊರೊನಾ ವೈರಸ್​ನಿಂದ ಮಹಾರಾಷ್ಟ್ರದ ಪುಣೆಯಲ್ಲಿ ಎಎಸ್​ಐ ಒಬ್ಬರು ಸಾವನ್ನಪ್ಪಿದ್ದಾರೆ. ಏಪ್ರಿಲ್​ ಕೊನೆ ವಾರದಲ್ಲೇ ಇವರಿಗೆ ಡೆಡ್ಲಿ ವೈರಸ್​ ತಗುಲಿದ್ದು ಕನ್ಫರ್ಮ್​ ಆಗಿತ್ತು.

57-year-old Pune police ASI dies of coronavirus
57-year-old Pune police ASI dies of coronavirus

By

Published : May 4, 2020, 6:03 PM IST

ಪುಣೆ: ದೇಶದಲ್ಲಿ ಕೊರೊನಾ ನರ್ತನ ಜೋರಾಗಿದ್ದು, ಈಗಾಗಲೇ 42 ಸಾವಿರಕ್ಕೂ ಹೆಚ್ಚು ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಇದೀಗ ಮಹಾರಾಷ್ಟ್ರದ ಪುಣೆಯಲ್ಲಿ ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ಆಗಿ ಸೇವೆಸಲ್ಲಿಸುತ್ತಿದ್ದ 57 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್​​ನಿಂದ ಬಳಲುತ್ತಿದ್ದ ಇವರು ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪುಣೆ ಜಂಟಿ ಕಮಿಷನರ್​​​ ರವೀಂದ್ರ ಶಿಶೈ ತಿಳಿಸಿದ್ದಾರೆ.

ಏಪ್ರಿಲ್​ ಕೊನೆಯ ವಾರದಲ್ಲಿ ಇವರಿಗೆ ಕೊರೊನಾ ಇರುವುದು ಕನ್ಫರ್ಮ್​​ ಆಗಿತ್ತು. ಅಂದಿನಿಂದಲೂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಪುಣೆಯಲ್ಲಿ 12 ಜನ ಪೊಲೀಸರಿಗೆ ಕೊರೊನಾ ವೈರಸ್​ ತಗುಲಿರುವುದು ದೃಢಪಟ್ಟಿದೆ. ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ಮಹಾರಾಷ್ಟ್ರದಲ್ಲಿ ಕಂಡು ಬಂದಿರುವುದು ಗಮನಾರ್ಹ ವಿಚಾರ.

ABOUT THE AUTHOR

...view details