ಕಾನ್ಪುರ:ಉತ್ತರ ಪ್ರದೇಶದ ಕಾನ್ಪುರದಲ್ಲಿನ ಮೂರು ಮದರಸಾಗಳ ಒಟ್ಟು 56 ವಿದ್ಯಾರ್ಥಿಗಳಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.
ತಬ್ಲಿಘಿಗಳ ಎಫೆಕ್ಟ್: ಕಾನ್ಪುರದಲ್ಲಿ ಮದರಸಾಗಳ 56 ವಿದ್ಯಾರ್ಥಿಗಳಿಗೆ ಕೊರೊನಾ..! - ಕಾನ್ಪುರ ಮದರಸಾ
ತಬ್ಲಿಘ್ ಜಮಾತ್ನಲ್ಲಿ ಪಾಲ್ಗೊಂಡು ಬಂದವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಕಾನ್ಪುರದ ಮೂರು ಮದರಸಾಗಳ 56 ವಿದ್ಯಾರ್ಥಿಗಳಿಗೆ ಕೊರೊನಾ ತಗುಲಿದೆ.

ಮದರಸಾಗಳ 56 ವಿದ್ಯಾರ್ಥಿಗಳಿಗೆ ಕೊರೊನಾ
ಕಾನ್ಪುರದಲ್ಲಿ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡು ಬಂದ ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರೊಂದಿಗೆ ವಿದ್ಯಾರ್ಥಿಗಳು ಸಂಪರ್ಕ ಬೆಳೆಸಿದ್ದರಿಂದ ಸೋಂಕು ತಗುಲಿದೆ.
ಸೊಂಕಿತರು ಕಾನ್ಪುರದ ಕುಲಿ ಬಜಾರ್‌ನಲ್ಲಿನ ಮದರಸಾ, ನೌಬಸ್ತಾದಲ್ಲಿನ ಮದರಸಾ ಮತ್ತು ಜಜ್ಮೌದಲ್ಲಿರುವ ಮದರಸಾದ 10 ರಿಂದ 20 ವರ್ಷದೊಳಗಿನ ವಿದ್ಯಾರ್ಥಿಗಳಾಗಿದ್ದಾರೆ.