ದೆಹಲಿ :ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಕೂಡ ದೆಹಲಿ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಾಜ್ಯದ ಫ್ಲೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣ ಪ್ರಾರಂಭಿಸಲು ಸಜ್ಜಾಗಿದೆ.
ಫ್ಲೈ ಓವರ್, ಕಾರಿಡಾರ್ ನಿರ್ಮಾಣಕ್ಕೆ ಪಿಪಿಪಿ ಮೊರೆ ಹೋದ ಕೇಜ್ರಿವಾಲ್ ಸರ್ಕಾರ - ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿ
ಐದು ವರ್ಷಗಳ ಹಿಂದೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಚಾರದ ಹರಿವನ್ನು ಸರಾಗಗೊಳಿಸುವ ಸಲುವಾಗಿ ರಾಜ್ಯದಲ್ಲಿ ಫ್ಲೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣವನ್ನು ಘೋಷಿಸಿದ್ದರು..
ಐದು ವರ್ಷಗಳ ಹಿಂದೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಚಾರದ ಹರಿವನ್ನು ಸರಾಗಗೊಳಿಸುವ ಸಲುವಾಗಿ ರಾಜ್ಯದಲ್ಲಿ ಫ್ಲೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣವನ್ನು ಘೋಷಿಸಿದ್ದರು. ಅದು ಈಗ ಕಾಗದದ ಮೇಲೆ ಮಾತ್ರ ಉಳಿದಿದೆ. ತನ್ನ ಭರವಸೆಗಳನ್ನು ಈಡೇರಿಸುವ ಸಲುವಾಗಿ, ಸರ್ಕಾರವು ಈಗ ಪಿಪಿಪಿ ಮಾದರಿಗೆ ಹೋಗಲು ನಿರ್ಧರಿಸಿದೆ.
ಒಪ್ಪಂದದಂತೆ ಬೃಹತ್ ಉದ್ಯಮಗಳು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುತ್ತವೆ. ಮುಂದಿನ ಕೆಲವು ವರ್ಷಗಳಲ್ಲಿ ರಾಜ್ಯ ಸರ್ಕಾರವು ಅವುಗಳು ಹೂಡಿಕೆಯಂತೆ ಹಿಂದಿರುಗಿಸುತ್ತದೆ. ಈ ಯೋಜನೆಯನ್ನು ರೂಪಿಸಲು ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.