ವೆಲ್ಲಿಂಗ್ಟನ್: ಸತತ ಮೂರು ಟಿ-20 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ನ್ಯೂಜಿಲೆಂಡ್ ಪಡೆ ನಾಲ್ಕನೇ ಪಂದ್ಯದಲ್ಲೂ ಸೋಲು ಕಂಡಿದ್ದು, ಈ ಮೂಲಕ 5 ಟಿ-20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ.
ಕಿವೀಸ್ ಪಡೆಗೆ ಮತ್ತೊಂದು ನಿರಾಸೆ: ಸೂಪರ್ ಓವರ್ನಲ್ಲೇ 4ನೇ ಟಿ-20 ಗೆದ್ದ ಟೀಂ ಇಂಡಿಯಾ!
4ನೇ ಟಿ-20 ಪಂದ್ಯದಲ್ಲೂ ಟೀಂ ಇಂಡಿಯಾ ಸೂಪರ್ ಓವರ್ ಮೂಲಕ ಗೆಲುವಿನ ನಗೆ ಬೀರಿದ್ದು, ಈ ಮೂಲಕ ಸರಣಿಯಲ್ಲಿ 4-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಇಲ್ಲಿನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ಭಾರತ- ನ್ಯೂಜಿಲ್ಯಾಂಡ್ ನಡುವಿನ ನಾಲ್ಕನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 20 ಓವರ್ನಲ್ಲಿ 165 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ ಕೂಡ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು.
ಸೂಪರ್ ಓವರ್ನಲ್ಲಿ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ 13ರನ್ಗಳಿಕೆ ಮಾಡಿ, ಭಾರತದ ಗೆಲುವಿಗೆ 14ರನ್ಗಳ ಟಾರ್ಗೆಟ್ ನೀಡಿತು. ಇದರ ಬೆನ್ನತ್ತಿದ್ದ ಟೀಂ ಇಂಡಿಯಾ 5ನೇ ಎಸೆತದಲ್ಲಿ 16ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ. ರಾಹುಲ್ ಮೊದಲ ಎಸೆತದಲ್ಲೇ ಸಿಕ್ಸರ್ ಹಾಗೂ ನಂತರದ ಎಸೆತದಲ್ಲಿ ಬೌಂಡರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.