ಕರ್ನಾಟಕ

karnataka

ETV Bharat / bharat

ಹೆಂಡ್ತಿ, ಇಬ್ಬರು ಮಕ್ಕಳ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಡ್ರೈವರ್​! - ಹೆಂಡ್ತಿ, ಇಬ್ಬರು ಮಕ್ಕಳ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಡ್ರೈವರ್

ಕಟ್ಟಿಕೊಂಡ ಹೆಂಡತಿ ಹಾಗೂ ಇಬ್ಬರು ಮುದ್ದಾದ ಮಕ್ಕಳ ಕೊಲೆಗೈದ ಗಂಡ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಹೆಂಡ್ತಿ, ಇಬ್ಬರು ಮಕ್ಕಳ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಡ್ರೈವರ್​!
32-yr-old kills wife, two kids, commits suicide

By

Published : Jan 18, 2020, 5:37 PM IST

ಲಕ್ನೋ(ಉತ್ತರ ಪ್ರದೇಶ) :32 ವರ್ಷದ ವ್ಯಕ್ತಿಯೋರ್ವ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಅದಕ್ಕೂ ಮುನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಕೊಲೆ ಮಾಡಿರುವ ಘಟನೆ ಕಳೆದ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್​ ಕಮಿಷನರ್​​ ಸುಜೀತ್​ ಪಾಂಡೆ ಮಾಹಿತಿ ನೀಡಿದ್ದು, ವೃತ್ತಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಆರ್ಥಿಕ ಸಂಕಷ್ಟದಿಂದ ನೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕೊಲೆಗೀಡಾದವರನ್ನು 32 ವರ್ಷದ ಪತಿ ಪಿಂಟು, ಪತ್ನಿ ಆರ್ತಿ(28), ಮಕ್ಕಳಾದ ನೇಹಾ(8) ನಿತಿಕಾ(6) ಎಂದು ಗುರುತಿಸಲಾಗಿದೆ.

ABOUT THE AUTHOR

...view details