ಹೈದರಾಬಾದ್(ತೆಲಂಗಾಣ): ನೊವೆಲ್ ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಹೀಗಾಗಿ ಎಲ್ಲ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಆದ್ರೆ, ಛತ್ತೀಸ್ಗಡದಿಂದ ಹೈದರಾಬಾದ್ಗೆ ಬಂದಿದ್ದ 300 ವಲಸೆ ಕಾರ್ಮಿಕರು ಹೈದರಾಬಾದ್ನಲ್ಲಿ ಸಿಲುಕಿಕೊಂಡಿದ್ದಾರೆ. ಇವರೀಗ ತಮಗೆ ಸಹಾಯ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ಛತ್ತೀಸ್ಗಡದ 300 ವಲಸೆ ಕಾರ್ಮಿಕರು ಅತಂತ್ರ... ಬಘೇಲ್ ಸರ್ಕಾರಕ್ಕೆ ಬಡಪಾಯಿಗಳ ಮೊರೆ - ಕೊರೊನಾ ಎಫೆಕ್ಟ್
ಛತ್ತೀಸ್ಗಡದಿಂದ ಬಂದಿದ್ದ 300 ವಲಸೆ ಕಾರ್ಮಿಕರು ತೆಲಂಗಾಣದ ಹೈದರಾಬಾದ್ನಲ್ಲಿ ಸಿಲುಕಿಕೊಂಡಿದ್ದಾರೆ. ಅತಂತ್ರವಾಗಿರುವ ತಮ್ಮನ್ನ ಮರಳಿ ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಸಿಎಂ ಭೂಪೇಶ್ ಬಘೇಲ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕಾರ್ಮಿಕರು ಛತ್ತೀಸ್ಗಡದ ರಾಜನಂದಗಾಂವ್ ಜಿಲ್ಲೆಗೆ ಸೇರಿದವರಾಗಿದ್ದು, ಮರಳಿ ತಾಯ್ನಾಡಿಗೆ ಹಿಂದಿರುಗಲು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಭೂಪೇಶ್ ಬಘೇಲ್ ಸರ್ಕಾರಕ್ಕೆ ಬೇಡಿಕೊಂಡಿದ್ದಾರೆ.
ಇಷ್ಟು ದಿನ ನಾವು ಇಲ್ಲಿ ಸಿಲುಕಿಕೊಳ್ಳತ್ತೇವೆ ಅಂದುಕೊಂಡಿರಲಿಲ್ಲ. ಮಾರ್ಚ್ 24ರಂದು ಲಾಕ್ಡೌನ್ ಘೋಷಣೆಯಾದಾಗ ಇದು ಕೇವಲ 21 ದಿನಗಳ ಆದೇಶ ಅಂದುಕೊಂಡಿದ್ದೆವು. ಆದರೆ, ಲಾಕ್ಡೌನ್ ಮುಂದುವರೆದಿದ್ದು, ನಾವು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದೇವೆ. ನಮ್ಮ ಬಳಿ ಹಣವಿಲ್ಲ. ದಯವಿಟ್ಟು ನಮ್ಮನ್ನ ಇಲ್ಲಿಂದ ರಕ್ಷಿಸಿ, ಛತ್ತೀಸ್ಗಡ ರಾಜ್ಯದಲ್ಲಿರುವ ತಮ್ಮ ಮನೆಗೆ ತಲುಪಿಸಿ ಎಂದು ಕಾರ್ಮಿಕರು ಸಿಎಂಗೆ ಮನವಿ ಮಾಡಿದ್ದಾರೆ.