ಉನಾ(ಹಿಮಾಚಲ ಪ್ರದೇಶ): ದೇಶದಲ್ಲಿ ಕಾಮುಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉತ್ತರ ಪ್ರದೇಶದ ಹಥ್ರಾಸ್ ಅತ್ಯಾಚಾರ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳಲ್ಲಿ ಮತ್ತಷ್ಟು ಅತ್ಯಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಮೂರು ವರ್ಷದ ಅಪ್ರಾಪ್ತೆ ಮೇಲೆ 11 ವರ್ಷದ ಬಾಲಕನಿಂದ ರೇಪ್, ಅರೆಸ್ಟ್! - ಉನಾ ಬಾಲಕಿ ಕ್ರೈಂ ಸುದ್ದಿ
11 ವರ್ಷದ ಬಾಲಕನೊಬ್ಬ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಆತನ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಉನಾದಲ್ಲಿ ಮೂರು ವರ್ಷದ ಅಪ್ರಾಪ್ತೆ ಮೇಲೆ 11 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿದ್ದಾನೆಂದು ತಿಳಿದು ಬಂದಿದ್ದು, ಈಗಾಗಲೇ ವಿವಿಧ ಸೆಕ್ಷನ್ಗಳ ಅಡಿ ಆತನ ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊರಗಡೆ ಆಟವಾಡಲು ಹೋಗಿದ್ದ ಬಾಲಕಿ ಅಳುತ್ತಾ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಿದಾಗ ತಪಾಸಣೆ ನಡೆಸಿರುವ ವೈದ್ಯರು ಅತ್ಯಾಚಾರ ನಡೆದಿದೆ ಎಂಬ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಾಲಕಿ ಕುಟುಂಬಸ್ಥರು ಪ್ರಕರಣ ದಾಖಲು ಮಾಡಿದ್ದು, ವಿಚಾರಣೆ ಮುಂದುವರೆದಿದ್ದಾಗಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.