ಅಜಮ್‌ಗರ್: ಉತ್ತರಪ್ರದೇಶದ ಅಜಮ್‌ಗರ್ ಜಿಲ್ಲೆಯ ದಿಯೋಗಾಂವ್ ಪ್ರದೇಶದ ಮೂರು ಬೇರೆ ಬೇರೆ ಸ್ಥಳಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರು ಪ್ರತಿಮೆಗಳನ್ನು ಕೆಲವು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದ 3 ಕಡೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರತಿಮೆಗಳು ಧ್ವಂಸ! - ಸಿಎಂ ಯೋಗಿ ಆದಿತ್ಯನಾಥ್
ಪ್ರತಿಮೆಗಳ ಧ್ವಂಸವು ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಜಮ್ಗರ್ನ ಪೊಲೀಸ್ ವರಿಷ್ಠಾಧಿಕಾರಿ ಪವನ್ ಪಾಂಡೆ ಮಾತನಾಡಿ, ಮೂರು ಗ್ರಾಮಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹಾನಿಗೊಳಗಾದ ವಿಗ್ರಹಗಳನ್ನು ಶೀಘ್ರವಾಗಿ ಬದಲಾಯಿಸುತ್ತೇವೆ ಎಂದು ಹೇಳಿದರು.
ಸಾಂದರ್ಭಿಕ ಚಿತ್ರ
ಪ್ರತಿಮಗಳನ್ನ ಮಂಗಳವಾರ ಧ್ವಂಸ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಜಮ್ಗರ್ನ ಪೊಲೀಸ್ ವರಿಷ್ಠಾಧಿಕಾರಿ ಪವನ್ ಪಾಂಡೆ ಮಾತನಾಡಿ, ಮೂರು ಗ್ರಾಮಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹಾನಿಗೊಳಗಾದ ವಿಗ್ರಹಗಳನ್ನು ಶೀಘ್ರವಾಗಿ ಬದಲಾಯಿಸುತ್ತೇವೆ ಎಂದು ಹೇಳಿದರು.
ಅಜಮ್ಗರ್ನ ಮಿರ್ಜಾ ಅಡಾಂಪುರ್, ಸಿರ್ಕಾಂತ್ಪುರ ಮತ್ತು ಬರ್ಮನ್ಪುರ ಗ್ರಾಮಗಳಲ್ಲಿ ವಿಗ್ರಹಗಳು ಧ್ವಂಸ ಮಾಡಲಾಗಿದೆ. ಪೊಲೀಸರು ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.
Last Updated : Aug 21, 2019, 5:40 PM IST