ಕರ್ನಾಟಕ

karnataka

ETV Bharat / bharat

ಜಮ್ಮುಕಾಶ್ಮೀರದ 5 ಜಿಲ್ಲೆಗಳಲ್ಲಿ  ಇಂಟರ್​ನೆಟ್ ಸೇವೆ​ ಪುನಾರಂಭ: ನಿಟ್ಟುಸಿರು ಬಿಟ್ಟ ಯುವ ಜನತೆ - jammu kashmir

370 ವಿಧಿ ರದ್ಧತಿ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದಲ್ಲಿ ರದ್ದುಗೊಂಡಿದ್ದ ಮೊಬೈಲ್​ ಇಂಟರ್​ನೆಟ್ ಸೇವೆಯು ಅಲ್ಲಿನ 5 ಜಿಲ್ಲೆಗಳಲ್ಲಿ ಪುನರಾರಂಭಗೊಂಡಿದೆ.

ಜಮ್ಮುಕಾಶ್ಮೀರ

By

Published : Aug 17, 2019, 9:47 AM IST

ಜಮ್ಮುಕಾಶ್ಮೀರ:ಕಣಿವೆ ರಾಜ್ಯದ 5 ಜಿಲ್ಲೆಗಳಲ್ಲಿ 2G ಮೊಬೈಲ್​ ಇಂಟರ್​ನೆಟ್​ ಸೇವೆ ಪುನರಾರಂಭಗೊಂಡಿದೆ. 370ನೇ ವಿಧಿ ರದ್ಧತಿ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದಲ್ಲಿ ಮೊಬೈಲ್​ ಇಂಟರ್​ನೆಟ್​ ಸಂಪರ್ಕ ಕಡಿತಗೊಳಿಸಲಾಗಿತ್ತು.

ಜಮ್ಮುಕಾಶ್ಮೀರದಲ್ಲಿ 370 ವಿಧಿ ರದ್ಧತಿ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದಲ್ಲಿ ಮೊಬೈಲ್​ ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗಿನಿಂದ ಜಮ್ಮು, ರೆಯಸಿ, ಸಂಬಾ, ಕಾಥುವಾ ಹಾಗೂ ಉಧಾಂಪುರ ಜಿಲ್ಲೆಗಳಲ್ಲಿ 2G ಇಂಟರ್​ನೆಟ್ ಸೇವೆ ಆರಂಭಗೊಂಡಿದೆ. ಭದ್ರತೆ ಹಿನ್ನೆಲೆಯಲ್ಲಿ ಆ.5ರಿಂದ ಇಂಟರ್​ನೆಟ್ ಸ್ಥಗಿತಗೊಂಡಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಹಂತಹಂತವಾಗಿ ಮತ್ತು ಕ್ರಮೇಣವಾಗಿ ಸಡಿಲಗೊಳಿಸಲು ಸರ್ಕಾರವು ಶುಕ್ರವಾರ ನಿರ್ಧರಿಸಿತ್ತು. ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಹಿನ್ನೆಲೆಯಲ್ಲಿ ಮೊಬೈಲ್​ ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಪುನರ್​​ ಪರಿಶೀಲಿಸಿ, ಕಾನೂನು ಸುವ್ಯವಸ್ಥೆಯ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ಬಿವಿಆರ್​ ಸುಬ್ರಮಣ್ಯಂ ತಿಳಿಸಿದ್ದಾರೆ.

ABOUT THE AUTHOR

...view details